
ಕೊಪ್ಪಳ, 07 ಜೂನ್ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಸತಿ ಶಾಲೆ ಅಥವಾ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ವಿಷಯ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಜಿಲ್ಲಾ ಹಂತದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೈ ಸ್ಕೂಲ್ ವಿಭಾಗದಲ್ಲಿ ಕಾಟಾಪೂರ-1, ಹನುಮನಾಳ-1 ಕಾರಟಗಿ-1, ಕನಕಗಿರಿ-1 ಶಾಲೆಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ,ವಿಷಯದಲ್ಲಿ ತಲಾ 4 ಖಾಲಿ ಸ್ಥಾನಗಳು ಹಾಗೂ ಕಾರಟಗಿ 1 ಶಾಲೆಯಲ್ಲಿ ಹಿಂದಿ ವಿಷಯದಲ್ಲಿ 1 ಹುದ್ದೆ ಖಾಲಿ ಇರುತ್ತದೆ. ಅದೇ ರೀತಿ ಕಾಟಾಪೂರ-1, ಹನುಮನಾಳ-1 ಹನುಕುಂಟಿ-1 ಕಾರಟಗಿ-1, ಕನಕಗಿರಿ-1 ಶಾಲೆಗಳಲ್ಲಿ ಗಣಿತ ವಿಷಯದಲ್ಲಿ 5 ಹುದ್ದೆಗಳು, ಕಾರಟಗಿ-1, ಹನುಮನಲಾಳ-1, ಬೇವೂರು -1 ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 3 ಹುದ್ದೆಗಳು, ಕನಕಗಿರಿ-1, ಬೇವೂರು-1, ಹನುಮನಾಳ-1 ಶಾಲೆಯಲ್ಲಿ ಗಣಕಯಂತ್ರ ವಿಷಯದಲ್ಲಿ 3 ಹುದ್ದೆಗಳು ಹಾಗೂ ಬೇವೂರು-1 ಶಾಲೆಯಲ್ಲಿ ದೈಹಿಕ ಶಿಕ್ಷಣ ವಿಷಯದಲ್ಲಿ 1 ಹುದ್ದೆ ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅದೆ ರೀತಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು ತಾಳಕೇರಿ ಪಿಯುಸಿ ವಿಭಾಗದಲ್ಲಿ ಭೌತಶಾಸ್ತ್ರ, ಗಣಕ ವಿಜ್ಞಾನ (ಸಿಎಸ್), ರಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ , ವಿಷಯದಲ್ಲಿ ಪ್ರತಿಯೊಂದು ವಿಷಯದಲ್ಲಿ ತಲಾ 1 ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆಗಳು: ಹಾಲಿ ಕ್ರೈಸ್ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರುಗಳು ಟಿಇಟಿ ಪಾಸಾಗಿದ್ದಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು. ಭಾಷೆ ವಿಷಯ ಶಿಕ್ಷಕರುಗಳಿಗೆ ಬಿಎ ಬಿ.ಎಡ್/ ಎಂಎ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಕೋರ್ ವಿಷಯ ಶಿಕ್ಷಕರುಗಳಿಗೆ ಬಿಎ ಬಿ.ಎಡ್/ ಎಂಎ ಬಿ.ಎಡ್, ಬಿಎಸ್ಸಿ ಬಿ.ಎಡ್/ ಎಂಎಸ್ಸಿ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಗಣಕ ವಿಜ್ಞಾನ ವಿಷಯ ಶಿಕ್ಷಕರುಗಳಿಗೆ ಬಿಸಿಎ/ ಬಿಎಸ್ಸಿ ಕಂಪ್ಯೂಟರ್ ಸೈನ್ಸ್/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್/ ಎಂಸಿಎ/ ಬಿಇ ಕಂಪ್ಯೂಟರ್ ಸೈನ್ಸ್/ ಬಿಇ ಇನ್ಫಾರ್ಮೇಶನ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಿಪಿ.ಎಡ್/ ಎಂಪಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು.
ಬಾಲಕೀಯರ ವಸತಿ ಶಾಲೆಗಳಿಗೆ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಎಲ್ಲಾ ಶಿಕ್ಷಕ ಹುದ್ದೆಗೆ ಟಿಇಟಿ ಕಡ್ಡಾಯ. ಕನ್ನಡ ಭಾಷೆ ಉಪನ್ಯಾಸಕರು ಎಂಎ ಕನ್ನಡ ಹಾಗೂ ಬಿ.ಎಡ್ ವಿದ್ಯಾರ್ಹತೆ ಕಡ್ಡಾಯ. ಗಣಕಯಂತ್ರ ಉಪನ್ಯಾಸಕರಿಗೆ ಎಂಸಿಎ/ ಎಂಎಸ್ಸಿ ಕಂಪ್ಯೂಟರ್ ಸೈನ್ಸ್/ ಎಂಸಿಎ/ ಬಿಇ ಕಂಪ್ಯೂಟರ್ ಸೈನ್ಸ್/ ಬಿಇ ಇನ್ಫಾರ್ಮೇಶನ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು.
ಆಂಗ್ಲ ಭಾಷೆ ಉಪನ್ಯಾಸಕರು ಎಂ.ಎ ಇಂಗ್ಲೀಷ್ & ಬಿ.ಎಡ್ ಕಡ್ಡಾಯ. ಭೌತಶಾಸ್ತ್ರ ಉಪನ್ಯಾಸಕರು ಎಂಎಸ್ಸಿ ಫಿಜಿಕ್ಸ್ & ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ರಸಾಯನಶಾಸ್ತ್ರ ಉಪನ್ಯಾಸಕರು ಎಂಎಸ್ಸಿ ಕೆಮಿಷ್ಟ್ರೀ & ಬಿ.ಎಡ್ ಪದವಿ ಪಡೆದಿರಬೇಕು. ಜೀವಶಾಸ್ತ್ರ ಉಪನ್ಯಾಸಕರಿಗೆ ಎಂಎಸ್ಸಿ ಬಾಟ್ನಿ/ ಜೂಲೋಜಿ & ಬಿ.ಎಡ್ ಕಡ್ಡಾಯವಾಗಿದೆ. ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಎನ್.ಇ.ಟಿ/ ಕೆ-ಸೆಟ್ ಪಾಸಾದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಜೂನ್ 8 ರಿಂದ ಜೂ. 15 ರೊಳಗಾಗಿ ಸಂಬಂಧಿಸಿದ ಆಯಾ ವಸತಿ ಶಾಲೆಗಳ/ ಕಾಲೇಜುಗಳ ಪ್ರಾಂಶುಪಾಲರಿಗೆ ಕಚೇರಿಯ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧ್ಯಕ್ಷರು ಆಯ್ಕೆ ಸಮಿತಿ ಹಾಗೂ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್