ಹವಾಮಾನ ಬದಲಾವಣೆಯ ಕಾರ್ಯಕ್ಷಮತೆಗಳನ್ನು ಅಳವಡಿಸಲು ವರದಿ : ಡಾ. ಸುರೇಶ್ ಇಟ್ನಾಳ
ಕೊಪ್ಪಳ, 06 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಗೆ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಕಾರ್ಯಕ್ಷಮತೆಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವರದಿಯನ್ನು ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಪರಿಸರ ನಿರ್ವಹಣೆ ಮತ್ತು ನ
Report preparation for implementing climate change performance measures


Report preparation for implementing climate change performance measures


ಕೊಪ್ಪಳ, 06 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಗೆ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಕಾರ್ಯಕ್ಷಮತೆಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ವರದಿಯನ್ನು ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ ಕುರಿತಾದ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಕಾರ್ಯಕ್ಷಮತೆ ಸೂಚಕಗಳ ಬಗ್ಗೆ ಇಲಾಖಾ ಅಧಿಕಾರಿಗಳು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಕೊಪ್ಪಳ ಜಿಲ್ಲೆಗೆ ಈ ಕಾರ್ಯಕ್ಷಮತೆಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಸೂಕ್ತ ವರದಿಯನ್ನು ತಯಾರಿಸಲು ತಾವುಗಳು ಶ್ರಮಿಸಬೇಕು.

ಇದರ ಜೊತೆಗೆ ಹೊಸ ತಂತ್ರಜ್ಞಾನಗಳ ಮೂಲಕ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕು. ನದಿ, ಕೆರೆಗಳ ನೀರಿನ ಗುಣಮಟ್ಟದ ಕಾಪಾಡುವುದು, ಮಾಲಿನ್ಯ ತಡೆಗಟ್ಟಲು ಪರಿಸರವನ್ನು ಸುಸ್ಥಿರವಾಗಿಡಲು ಮತ್ತು ಹಸಿರು ಇಂಧನಗಳ ಬಳಕೆಯನ್ನು ಹೆಚ್ಚಿಸಲು ನಾವೆಲ್ಲರೂ ಕೈಜೊಡಿಸಬೇಕೆಂದರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಂಪ್ರಿ ಸಂಸ್ಥೆ ಬೆಂಗಳೂರಿನ ಹಿರಿಯ ಸಮಾಲೋಚಕರಾದ ಡಾ. ಬಿ. ಸರಿತಾ ಅವರು ಹವಾಮಾನ ಬದಲಾವಣೆ ಕುರಿತು ಕರ್ನಾಟಕ ಕ್ರಿಯಾ ಯೋಜನೆ ಬಗ್ಗೆ ಸುದೀರ್ಘವಿವರಣೆ ನೀಡಿದರು. ಜೊತೆಗೆ ಕಾರ್ಯನಿರ್ತಿ, ಕಾರ್ಯತಂತ್ರಗಳು ಮತ್ತು ವಿವಿಧ ಇಲಾಖೆಗಳ, ಸಂಘ-ಸಂಸ್ಥೆಗಳ ಕರ್ತವ್ಯವನ್ನು ವಿವರಿಸಿದರು ಹಾಗೂ ಅಲ್ಪಾವಧಿ ಹವಾಮಾನ ಮಾಲಿನ್ಯ ಕಾರಕಗಳ ಪರಿಣಾಮಗಳು ಮತ್ತು ಕೊಪ್ಪಳ ಜಿಲ್ಲೆಯಲ್ಲಿನ ಅವುಗಳ ದತ್ತಾಂಶಗಳ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಶಶಿಕುಮಾರ್ ಅಭ್ಯರ್ಥಿಗಳಿಗೆ ಜಲ ಸಂಪನ್ಮೂಲ ವಲಯದ ಹವಾಮಾನ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲೆಯ ಎನ್.ಆರ್.ಡಿ.ಎಂ.ಎಸ್ ಅಧಿಕಾರಿಗಲಾದ ಗುರುಸ್ವಾಮಿಪಿ ಅವರು, ಅಭ್ಯರ್ಥಿಗಳಿಗೆ ಎನ್.ಆರ್.ಡಿ.ಎಂ.ಎಸ್ ಕೇಂದ್ರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಗದಾಂಬ ಅವರು ಉಪಸ್ಥಿತರಿದ್ದರು. ಲತ ಎಂ.ಎಚ್ ಅವರು ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande