ಬಳ್ಳಾರಿ : ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ
ಬಳ್ಳಾರಿ, 05 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರಾದ್ಯಂತ ಸಸಿ ನೆಡುವ ಮೂಲಕ ನಗರದಲ್ಲಿ ಹಸಿರು ವ್ಯಾಪಿಸುವಂತೆ - ನೆರಳಾಗುವಂತೆ ಮಾಡಬೇಕು ಎಂದು ನಗರ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ತಿಳಿಸಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ
World Environment Day celebration


World Environment Day celebration


ಬಳ್ಳಾರಿ, 05 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರಾದ್ಯಂತ ಸಸಿ ನೆಡುವ ಮೂಲಕ ನಗರದಲ್ಲಿ ಹಸಿರು ವ್ಯಾಪಿಸುವಂತೆ - ನೆರಳಾಗುವಂತೆ ಮಾಡಬೇಕು ಎಂದು ನಗರ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ತಿಳಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಬಳಿ ಸಸಿ ನೆಟ್ಟ ಅವರು, ಕೈಗಾರೀಕರಣ, ನಗರೀಕರನ ಮತ್ತು ಕಾಂಕ್ರೀಟ್ ಕಾಡುಗಳ ನಿರ್ಮಾಣದ ಕಾರಣ ಹಸಿರು ಇಲ್ಲವಾಗುತ್ತಿದೆ. ಕಾರಣ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಪ್ರತಿಯೊಬ್ಬರಿಗೆ ಒಂದು ಮರ, ಮನೆಗೊಂಡು ಮರ, ಊರಿಗೊಂಡು ವನ ರೂಪಿಸಲು ಪ್ರಯತ್ನಿಸಬೇಕು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರ್ರಂ ವೆಂಕಟರಮಣ, ಕಾರ್ಪೊರೇಟರುಗಳಾದ ಶ್ರೀನಿವಾಸ ಮೋತ್ಕರ್ ಇನ್ನಿತರರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande