
ಕುಷ್ಟಗಿ, 05 ಜೂನ್ (ಹಿ.ಸ.) :
ಆ್ಯಂಕರ್ : ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಲಗೇರಿ ಗ್ರಾಮದ ಈರಮ್ಮ ಗಂಡ ಪರಸಪ್ಪ (29)
ಏಪ್ರಿಲ್ ತಿಂಗಳಿಂದ ಕಾಣೆಯಾಗಿದ್ದು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ. 81-2026 ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ ಧನುಂಜಯ ಎಮ್. ಅವರು ತಿಳಿಸಿದ್ದಾರೆ.
ಮಹಿಳೆಯ ಚಹರೆ ಪಟ್ಟಿ: ನಾಪತ್ತೆಯಾದ ಈರಮ್ಮ ಸುಮಾರು 5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.
ಮನೆಯಿಂದ ಹೊರಡುವ ವೇಳೆ ಕೆಂಪು ಬಣ್ಣದ ಪ್ಯಾಂಟ್ ಹಾಗೂ ಚಾಕಲೇಟ್ ಬಣ್ಣದ ಚೆಕ್ಸ್ ಟಾಪ್ ಧರಿಸಿರುತ್ತಾಳೆ.
ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹನುಮಸಾಗರ ಪೊಲೀಸ್ ಠಾಣೆಯ ಮೊ.ನಂ. 9480803759 ಗೆ ಸಂಪರ್ಕಿಸುವಂತೆ ಹನುಮಸಾಗರ ಪೊಲೀಸ್ ಠಾಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್