ಜೂನ್ 14 ರಂದು ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ; ನೋಂದಣಿಗೆ ಸೂಚನೆ
ಕೊಪ್ಪಳ, 05 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14 ರ ಭಾನುವಾರರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ವಿಶ್ವ ಚೆಸ್ ಅಕಾಡೆಮಿ(ರಿ) ಮತ್ತು ಜಿಲ್ಲಾ ಚೆಸ್ ಅಸೋಶಿಯೇಷನ್, ಕೊಪ್ಪಳ ವತಿಯಿಂದ ಬೃಹತ್ ರಾಜ್ಯ ಮಟ್ಟದ ಚದುರಂಗVishwa Royal Chess
ಜೂನ್ 14 ರಂದು ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ; ನೋಂದಣಿಗೆ ಸೂಚನೆ


ಕೊಪ್ಪಳ, 05 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14 ರ ಭಾನುವಾರರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ವಿಶ್ವ ಚೆಸ್ ಅಕಾಡೆಮಿ(ರಿ) ಮತ್ತು ಜಿಲ್ಲಾ ಚೆಸ್ ಅಸೋಶಿಯೇಷನ್, ಕೊಪ್ಪಳ ವತಿಯಿಂದ ಬೃಹತ್ ರಾಜ್ಯ ಮಟ್ಟದ ಚದುರಂಗVishwa Royal Chess Arena 2k26” ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳಿಗೆ ಅವಕಾಶವನ್ನು ಕಲ್ಪಿಸಿದ್ದು, ಪಂದ್ಯಾವಳಿಯಲ್ಲಿ ಆಸಕ್ತಿಯುಳ್ಳ ಕ್ರೀಡಾಪಟುಗಳು ಭಾಗವಹಿಸಬಹುದು. ಹಾಗೂ ಜಯಶಾಲಿಯಾಗುವ ಕ್ರೀಡಾಪಟುಗಳಿಗೆ ಒಟ್ಟು ರೂ.15,000/- ನಗದು ಬಹುಮಾನ, ಆಕರ್ಷಕ ಕಪ್ಗಳು, ಪದಕಗಳು ಹಾಗೂ ಇ-ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಪಂದ್ಯಾವಳಿಯಲ್ಲಿ ಕಲಬುರಗಿ ಜಿಲ್ಲೆಯ ಅಂತರರಾಷ್ಟ್ರೀಯ ಆರ್ಬಿಟರ್ ((Chief Arbiter) ಆದ ಐಎ ಪ್ರಮೋದ್ ಜೆ. ಮೋರೆ ಅವರು ಮುಖ್ಯ ನಿರ್ಣಾಯಕರಾಗಿ ಕ್ರೀಡಾಕೂಟವನ್ನು ಮುನ್ನಡೆಸಲಿದ್ದಾರೆ.

ಪಂದ್ಯಾವಳಿಯಲ್ಲಿ ರಾಜ್ಯದ 3 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಚದುರಂಗ ಆಟಗಾರರು ಭಾಗವಹಿಸಬಹುದು. ಪಂದ್ಯದಲ್ಲಿ ಒಟ್ಟು 7 ಸುತ್ತುಗಳಿರುತ್ತವೆ. ಸಮಯದ ನಿಯಂತ್ರಣ 15 ನಿಮಿಷ (5 ಸೆಕೆಂಡ್ ಹೆಚ್ಚುವರಿ ಪ್ರತಿ ನಡೆಗೆ). ವಯೋಮಿತಿ U-10, U-13, U-16 ಮತ್ತು Open ವಿಭಾಗಗಳು (ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗ) ಆಗಿರುತ್ತವೆ.

ವಿಶೇಷ ಬಹುಮಾನಗಳಾಗಿ ಬೆಸ್ಟ್ ಕೊಪ್ಪಳ ಪ್ಲೇಯರ್, ಬೆಸ್ಟ್ ಫೀಮೇಲ್ ಪ್ಲೇಯರ್ (17ವರ್ಷ ಮೇಲ್ಪಟ್ಟವರಿಗೆ), ಬೆಸ್ಟ್ ಯಂಗೆಸ್ಟ್ ಪ್ಲೇಯರ್, ಬೆಸ್ಟ್ ವೆಟರನ್ ಪ್ಲೇಯರ್ (50ವರ್ಷ ಮೇಲ್ಪಟ್ಟವರಿಗೆ) ಹಾಗೂ ಬೆಸ್ಟ್ ವಿಶ್ವ ಚೆಸ್ ಅಕಾಡೆಮಿ ಪ್ಲೇಯರ್ಸ್ ಪ್ರಶಸ್ತಿಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಆಟಗಾರರಿಗೆ ಹಾಗೂ ಪೋಷಕರಿಗೆ ಉಚಿತ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

ನೋಂದಣಿ ಶುಲ್ಕ ರೂ.500/- ಆಗಿದ್ದು, ಕೆಎಸ್ಸಿಎ ನೋಂದಣಿ ಕಡ್ಡಾಯವಾಗಿರುತ್ತದೆ. ಜೂನ್ 13 ನೋಂದಣಿಗೆ ಕೊನೆಯ ದಿನವಾಗಿದೆ. ಶುಲ್ಕ ಪಾವತಿ ಮತ್ತು ಪ್ರವೇಶ ಖಚಿತಪಡಿಸಲು ಮೊ.ಸಂ: 8867558702, 9113889338 ಇವರನ್ನು ಹಾಗೂ FIDE ID ಸಲ್ಲಿಕೆ ಹಾಗೂ ತಾಂತ್ರಿಕ ವಿವರಗಳಿಗಾಗಿ ಮೊ.ಸಂ.: 8904348309 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande