
ಮುನಿರಾಬಾದ್, 05 ಜೂನ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಮುನಿರಾಬಾದ್ ಉಪ-ವಿಭಾಗದ ವ್ಯಾಪ್ತಿಯ ಗಿಣಿಗೇರಾ 110/33/11 ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂ ಮುನಿರಾಬಾದ್ನ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ತಿಳಿಸಿದ್ದಾರೆ.
ಅಂದು ಗಿಣಿಗೇರಾ ಮತ್ತು ಗಿಣಿಗೇರಾ ಬೈಪಾಸ್, ಹಳೆ ಕನಕಾಪುರ, ಹೊಸ ಕನಕಾಪುರ, ಕನಕಾಪುರ ತಾಂಡಾ, ಹಿರೇ ಬಗನಾಳ, ಕುಟುಗನಹಳ್ಳಿ, ಚಿಕ್ಕ ಬಗನಾಳ, ಅಲ್ಲಾನಗರ, ಕಲ್ ತಾವರಗೇರಾ, ಗಬ್ಬೂರು, ಹಾಲಹಳ್ಳಿ ಹಾಗೂ ಭೀಮನೂರು, ಎಫ್3 ಬಗನಾಳ ಎನ್ಜೆವೈ ಫೀಡರ್, ಎಫ್13 ಹಾಲಹಳ್ಳಿ ಎನ್ಜೆವೈ ಫೀಡರ್, ಎಫ್7 ಎಸ್.ಆರ್.ಸಿ ಇಂಡಸ್ಟ್ರಿಯಲ್ ಫೀಡರ್, ಎಫ್10 ಗಾಳೆಮ್ಮ, ಎಫ್12 ಗಿಣಿಗೇರಾ ಮತ್ತು ಎಫ್11 ಕಲ್ ತಾವರಗೇರಾ, ಎಫ್9 ಎನ್ಜೆವೈ, ಎಫ್33 ಕೋಕಾ ಕೋಲಾ ಫೀಡರ್ಗೆ ಸಂಬಂಧಪಟ್ಟ ಎಲ್ಲಾ ಇಂಡಸ್ಟ್ರೀಸ್, ಕೆಎನ್ಎನ್ಎಲ್ ಎಲ್ಐಎಸ್ ಫೀಡರ್, ಎಫ್1 ಕುಣಿಕೇರಿ ಐಪಿ, ಎಫ್2 ಕರ್ಕಿಹಳ್ಳಿ ಐಪಿ, ಎಫ್5 ಅಲ್ಲಾನಗರ ಐಪಿ, ಎಫ್4 ಪೌಲ್ಟ್ರಿ ಫಾರ್ಮ್, ಎಫ್6 ಐಪಿ ಕಾಸನಕಂಡಿ ಹಾಗೂ ಪಿಬಿಎಸ್ ಸೋಲಾರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾಮಗಾರಿಯು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್