
ಕೊಪ್ಪಳ, 05 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಭಾಗ್ಯನಗರದ ಸಂತೋಷ ತಂದೆ ಸುರೇಶ ಪಾಟೀಲ್ (25) ಕಾಣೆಯಾಗಿರುವ ಕುರಿತು ಕಾಣೆಯಾದ ವ್ಯಕ್ತಿಯ ಹೆಂಡತಿಯು ದೂರು ನೀಡಿದ್ದಾರೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪಳ ನಗರ ಪೊಲೀಸ್ ಠಾಣೆಯ ಗುನ್ನೆ ನಂ 69/2026 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ವ್ಯಕ್ತಿಯ ಚಹರೆ ಪಟ್ಟಿ: ಸಂತೋಷ ತಂದೆ ಸುರೇಶ ಪಾಟೀಲ್, ವಯಸ್ಸು 25 ವರ್ಷ, ಎತ್ತರ 5.6 ಅಡಿ, ದುಂಡು ಮುಖ, ಕೆಂಪು ಮುಖ ಬಣ್ಣ, ಸದೃಡ ಮೈಕಟ್ಟು,ತಲೆಯಲ್ಲಿ ಕಪ್ಪು ಕೂದಲುಗಳು ಹಾಗೂ ಕುರುಚಲು ದಾಡಿ ಇದ್ದು, ಕನ್ನಡ ಮತ್ತು ಹಿಂದಿ ಭಾಷೆ, ಮಾತನಾಡುತ್ತಾನೆ.
ಮನೆಯಿಂದ ಹೊರಡುವಾಗ ಬಿಳಿ ಆಪ್ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ ನಂ.: 08539-230100 ಮತ್ತು 230222 ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮೊನಂ: 9480803745 ಅಥವಾ ಕೊಪ್ಪಳ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539 220333 ಗೆ ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್