
ಕುಷ್ಟಗಿ, 05 ಜೂನ್ (ಹಿ.ಸ.) :
ಆ್ಯಂಕರ್ : ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಪವಿತ್ರಾ ತಂದೆ ಬಸವರಾಜ (18) ಕಾಣೆಯಾಗಿದ್ದಾರೆ ಎಂದು ಹನುಮಸಾಗರ ಪೊಲೀಸ್ ಠಾಣೆಯ ಪಿ.ಎಸ್.ಐ ಧನುಂಜಯ ಎಮ್. ಅವರು ತಿಳಿಸಿದ್ದಾರೆ.
ಯುವತಿಯ ಚಹರೆ ಪಟ್ಟಿ : ಪವಿತ್ರಾ ತಂದೆ ಬಸವರಾಜ ಪಂಚಪುತ್ರ, ವಯಸ್ಸು 18 ವರ್ಷ, ಎತ್ತರ 5 ಅಡಿ, ದುಂಡು ಮುಖ, ಸಾದಾರಣ ಮೈ ಕಟ್ಟು,ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ, ಮಾತನಾಡುತ್ತಾಳೆ.
ಯುವತಿಯು ಮನೆಯಿಂದ ಹೊರಡುವಾಗ ಚಾಕಲೇಟ್ ಬಣ್ಣದ ಟಾಪ್ ಹಾಗೂ ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹನುಮಸಾಗರ ಪೊಲೀಸ್ ಠಾಣೆಯ ಮೊ ನಂ.9480803759 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಹನುಮಸಾಗರ ಪೊಲೀಸ್ ಠಾಣೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್