
ಬಳ್ಳಾರಿ, 05 ಜೂನ್ (ಹಿ.ಸ.):
ಆ್ಯಂಕರ್:
ಕುಡತಿನಿಯ ಭೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಸಮಿತಿಯು ಜೂನ್ 18 ರ ಗುರುವಾರ ನಡೆಸಲು ಉದ್ದೇಶಿಸಿರುವ `ಬಳ್ಳಾರಿ ಜಿಲ್ಲಾ ಬಂದ್'ಗೆ ಸಾರ್ವಜನಿಕರ ಬೆಂಬಲ ಕೋರಿ ಬಳ್ಳಾರಿ ನಗರದ ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಪ್ರತಿಕೃತಿಯನ್ನು ಶುಕ್ರವಾರ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿವೆ.
ಕುಡತಿನಿಯ ಭೂ ಸಂತಸ್ತ್ರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ (ಕೆಪಿಆರ್-ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್
ಯೂನಿಯನ್ಸ್ (ಸಿಐಟಿಯು), ಕನ್ನಡ ಪರ ಸಂಘಟನೆಗಳು, ಡಿವೈಎಫ್ಐ, ಎಐಟಿಯುಸಿ, ಎಸ್ಎಫ್ಐ, ರಾಜ್ಯ ರೈತ ಸಂಘ, ಹಸಿರು ಸೇನೆ
ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಗ್ಗೆ ಕುಡತಿನಿಯಲ್ಲಿ ಬೈಕ್ ರ್ಯಾಲಿ ನಡೆಸಿ, ಬಳ್ಳಾರಿಗೆ ಆಗಮಿಸಿ, `ಬಳ್ಳಾರಿ ಜಿಲ್ಲಾ ಬಂದ್' ಯಶಸ್ವಿಗಾಗಿ ಸಾರ್ವಜನಿಕರ ಸಹಕಾರವನ್ನು ಕೋರಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿರುವ ಜೆ. ಸತ್ಯಬಾಬು, ಮುಖಂಡ ಎಂ. ತಿಪ್ಪೇಸ್ವಾಮಿ ಅವರು ಪ್ರತಿಭಟನೆಯ ನೇತೃತ್ವವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.