ಕುಡತಿನಿ ಭೂ ಸಂತ್ರಸ್ತರ ಹೋರಾಟ : ಜೂನ್ 18ರ `ಬಳ್ಳಾರಿ ಜಿಲ್ಲಾ ಬಂದ್'ಗಾಗಿ ಪ್ರತಿಭಟನೆ
ಬಳ್ಳಾರಿ, 05 ಜೂನ್ (ಹಿ.ಸ.) : ಆ್ಯಂಕರ್ : ಕುಡತಿನಿಯ ಭೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಸಮಿತಿಯು ಜೂನ್ 18 ರ ಗುರುವಾರ ನಡೆಸಲು ಉದ್ದೇಶಿಸಿರುವ `ಬಳ್ಳಾರಿ ಜಿಲ್ಲಾ ಬಂದ್''ಗೆ ಸಾರ್
Kudathini landmine victims' struggle: Protest for `Bellary district bandh' on June 18


ಬಳ್ಳಾರಿ, 05 ಜೂನ್ (ಹಿ.ಸ.) :

ಆ್ಯಂಕರ್ : ಕುಡತಿನಿಯ ಭೂ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಸಮಿತಿಯು ಜೂನ್ 18 ರ ಗುರುವಾರ ನಡೆಸಲು ಉದ್ದೇಶಿಸಿರುವ `ಬಳ್ಳಾರಿ ಜಿಲ್ಲಾ ಬಂದ್'ಗೆ ಸಾರ್ವಜನಿಕರ ಬೆಂಬಲ ಕೋರಿ ಬಳ್ಳಾರಿ ನಗರದ ಗಡಿಗೆ ಚೆನ್ನಪ್ಪ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಪ್ರತಿಕೃತಿಯನ್ನು ಶುಕ್ರವಾರ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿವೆ.

ಕುಡತಿನಿಯ ಭೂ ಸಂತಸ್ತ್ರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ (ಕೆಪಿಆರ್-ಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್

ಯೂನಿಯನ್ಸ್ (ಸಿಐಟಿಯು), ಕನ್ನಡ ಪರ ಸಂಘಟನೆಗಳು, ಡಿವೈಎಫ್ಐ, ಎಐಟಿಯುಸಿ, ಎಸ್ಎಫ್ಐ, ರಾಜ್ಯ ರೈತ ಸಂಘ, ಹಸಿರು ಸೇನೆ

ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಗ್ಗೆ ಕುಡತಿನಿಯಲ್ಲಿ ಬೈಕ್ ರ್ಯಾಲಿ ನಡೆಸಿ, ಬಳ್ಳಾರಿಗೆ ಆಗಮಿಸಿ, `ಬಳ್ಳಾರಿ ಜಿಲ್ಲಾ ಬಂದ್' ಯಶಸ್ವಿಗಾಗಿ ಸಾರ್ವಜನಿಕರ ಸಹಕಾರವನ್ನು ಕೋರಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿರುವ ಜೆ. ಸತ್ಯಬಾಬು, ಮುಖಂಡ ಎಂ. ತಿಪ್ಪೇಸ್ವಾಮಿ ಅವರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande