
ಬೆಂಗಳೂರು, 05 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರಾಗಿದ್ದ ಗುರೂಜಿ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಕ್ತಿಪೂರ್ವಕ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಗುರೂಜಿಯವರನ್ನು ಶ್ರೇಷ್ಠ ರಾಷ್ಟ್ರಚಿಂತಕರು ಹಾಗೂ ಅಪ್ರತಿಮ ಸಂಘಟಕರಾಗಿ ಸ್ಮರಿಸಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಮತ್ತು ಸಂಘಟನಾ ಸಾಮರ್ಥ್ಯದ ಮೂಲಕ ರಾಷ್ಟ್ರಜಾಗೃತಿ ಮೂಡಿಸಿದ ಅವರು, ಕೋಟ್ಯಂತರ ಸ್ವಯಂಸೇವಕರಲ್ಲಿ ದೇಶಭಕ್ತಿ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಜ್ಯೋತಿಯನ್ನು ಬೆಳಗಿಸಿದರು ಎಂದು ಹೇಳಿದ್ದಾರೆ.
ಗುರೂಜಿಯವರ ಬದುಕು ತಾಯಿ ಭಾರತಾಂಬೆಯ ಸೇವೆಗೆ ಸಂಪೂರ್ಣವಾಗಿ ಸಮರ್ಪಿತವಾಗಿತ್ತು. ಅವರ ಮಾರ್ಗದರ್ಶನ, ಚಿಂತನೆಗಳು ಹಾಗೂ ಆದರ್ಶಗಳು ಇಂದಿಗೂ ಪ್ರತಿಯೊಬ್ಬ ಸ್ವಯಂಸೇವಕರಿಗೆ ಸ್ಫೂರ್ತಿಯ ಮೂಲವಾಗಿವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಅವರ ರಾಷ್ಟ್ರನಿಷ್ಠ ಚೇತನ, ತ್ಯಾಗ ಮತ್ತು ಸೇವಾಭಾವವನ್ನು ಸ್ಮರಿಸುತ್ತಾ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳನ್ನು ಅರ್ಪಿಸಿರುವುದಾಗಿ ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.