ಕುರುಬರ ಸಂಘದ ಹಾಸ್ಟೆಲ್ ನಿರ್ಮಾಣಕ್ಕೆ ಆರು ಲಕ್ಷ ರೂಪಾಯಿ ದೇಣಿಗೆ
ಕುರುಬರ ಸಂಘದ ಹಾಸ್ಟೆಲ್ ನಿರ್ಮಾಣಕ್ಕೆ ಆರು ಲಕ್ಷ ರೂಪಾಯಿ ದೇಣಿಗೆ
ಕುರುಬರ ಸಂಘದ ಹಾಸ್ಟಲ್ ನಿರ್ಮಾಣಕ್ಕೆ ಸಂಘದ ಅಧ್ಯಕ್ಷ ಜೆ.ಕೆ. ಜಯರಾಮ್ ಆರು ಲಕ್ಷ ರೂಪಾಯಿ ಚೆಕ್ ನೀಡಿದರು.


ಕೋಲಾರ, ೦೫ ಜೂನ್ (ಹಿ.ಸ) :

ಆ್ಯಂಕರ್ : ಕುರುಬರ ಸಂಘದ ಅಧ್ಯಕ್ಷನಾಗಿ ಸ್ವಯಂ ಘೋಷಣೆ ಮಾಡಿಕೊಂಡಿಲ್ಲ ಸಂಘದ ಬೈಲಾ ಪ್ರಕಾರವೇ ನೈಜ ಸದಸ್ಯರು ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ಕುರುಬರ ಸಂಘದ ಮಾಜಿ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ ಅವರಿಗೆ ಮಾಹಿತಿ ಕೊರತೆ ಎಂದು ನಿಕಟಪೂರ್ವ ಅಧ್ಯಕ್ಷ ಜೆ.ಕೆ ಜಯರಾಮ್ ತಿಳಿಸಿದರು

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಸಹಕಾರ ಇಲಾಖೆಯ ಆದೇಶದಂತೆ ಹಿಂದೆ ನನ್ನನ್ನು ಕುರುಬರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಮುಂದೆ ಸಹ ಸಹಕಾರ ಇಲಾಖೆಯ ಆದೇಶದಂತೆ ಸರ್ವ ಸದಸ್ಯರ ಸಭೆ ಕರೆದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು

ಸಹಕಾರ ಸಂಘಗಳ ಬೈಲಾ ಪ್ರಕಾರ ಜಿಲ್ಲಾ ಕುರುಬರ ಸಂಘದಲ್ಲಿ ೨೧ ಜನ ನಿರ್ದೇಶಕರು ಇದ್ದು ತಂಬಹಳ್ಳಿ ಮುನಿಯಪ್ಪ ರಾಜೀನಾಮೆ ನೀಡಿದ ನಂತರ ನನ್ನನ್ನು ಸಂಘದ ಆಡಳಿತ ಮಂಡಳಿ ಸಭೆ ನಡೆಸಿ ದಾಖಲಾತಿ ಪುಸ್ತಕದಲ್ಲಿ ನಮೂದಿಸಿಯೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಅವರು ಹೇಳುವಂತೆ ತಾತ್ಕಾಲಿಕ ಅಧ್ಯಕ್ಷ ಎಂದು ನಡುವಳಿಕೆ ಪುಸ್ತಕದಲ್ಲಿ ನಮೂದು ಮಾಡಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಸದಸ್ಯತ್ವ ಮಾಡಲು ಜವಾಬ್ದಾರಿ ಕೊಟ್ಟಿದ್ದಾರೆ ನಾನು ರಾಜೀನಾಮೆ ಕೊಟ್ಟಿಲ್ಲ ಸದ್ಯಕ್ಕೆ ನಾನು ನಿಕಟಪೂರ್ವ ಅಧ್ಯಕ್ಷ ಸ್ಥಾನದಲ್ಲಿದ್ದು, ನೈಜ ಸದಸ್ಯರು ಸೇರಿ ೨೦ ದಿನದಲ್ಲಿ ಸಭೆ ಮಾಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸದಸ್ಯತ್ವವನ್ನು ನೋಂದಣಿ ಮಾಡಿಸಿ ಸರ್ವ ಸದಸ್ಯರ ಸಭೆ ಕರೆಯುವುದಾಗಿ ತಿಳಿಸಿದರು.

ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ಮಾಜಿ ಅಧ್ಯಕ್ಷ ಮುನಿಯಪ್ಪನವರು ಸಂಘದ ಯಾವುದೇ ದಾಖಲೆಗಳನ್ನು ಕೊಡಲಿಲ್ಲ. ಗೌರವ ಅಧ್ಯಕ್ಷರು ಹೇಳಿದರೂ ಕೊಡಲಿಲ್ಲ. ನೈಜ ೨೧ ಸದಸ್ಯರು ಬಿಟ್ಟರೆ ಬೇರೆ ಯಾರನ್ನೂ ಸದಸ್ಯರನ್ನು ತಂಬಿಹಳ್ಳಿ ಮುನಿಯಪ್ಪ ಮಾಡಿಲ್ಲ ನೂತನ ಸದಸ್ಯತ್ವವನ್ನು ಮಾಡಲು ಅವಕಾಶ ಕೊಟ್ಟಿಲ್ಲ.ಆದ್ದರಿಂದ ನಾನು ಒಂದು ವರ್ಷ ಕಾಲ ಸಂಘದ ಯಾವುದೇ ಕೆಲಸ ಮಾಡದೆ ಸುಮ್ಮನೆ ಕೂರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನಡಾವಳಿ ಪುಸ್ತಕದಲ್ಲಿ ಮುನಿಯಪ್ಪನವರ ರಾಜೀನಾಮೆ ನೀಡಿದ ಹಾಗೂ ತಮ್ಮನ್ನು ಅಧ್ಯಕ್ಷನ್ನಾಗಿ ದಾಖಲೆ ಮಾಡಿದ ದಾಖಲೆಗಳನ್ನು ಹರಿದು ಹಾಕಿ ಮತ್ತೆ ಕೆಲವು ನೈಜ ಸದಸ್ಯರ ಹೆಸರುಗಳನ್ನು ಕೈಬಿಟ್ಟು ನೂತನ ಸಮಿತಿ ಮಾಡಿದಂತೆ ತೋರಿಸಿ ಮುನಿಯಪ್ಪನವರು ಸಂಘದ ನವೀಕರಣಕ್ಕೆ ಸಹಕಾರ ಇಲಾಖೆಯ ಕಛೇರಿಗೆ ಸಲ್ಲಿಸಿರುತ್ತಾರೆ.ಆ ಪಟ್ಟಿಯಲ್ಲಿ ನೈಜ ಸದಸ್ಯರುಗಳಾದ ನನ್ನ ಮತ್ತು ಖಜಾಂಚಿ ಜಂಬಾಪುರ ವೆಂಕಟರಾವ್ ಹೆಸರು ಬಿಟ್ಟಿರುತ್ತಾರೆ.ವಿಷಯ ತಿಳಿದ ನಾನು ತಕರಾರು ಅರ್ಜಿ ನೀಡಿ ತಡೆ ತಂದಿದ್ದು, ಪ್ರಸ್ತುತ ಸಹಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ವ ಸದಸ್ಯರ ಸಭೆ ನಡೆಸಿ ನೂತನ ಆಡಳಿತ ಮಂಡಳಿಯ ಆಯ್ಕೆಗೆ ಸೂಚಿಸಿದ್ದು ಅದರಂತೆ ೯೦ ದಿನಗಳ ಒಳಗಡೆ ಸಭೆ ನಡೆಸಿ ನೂತನ ಆಡಳಿತ ಮಂಡಳಿಯ ರಚನೆ ಮಾಡುವುದಾಗಿ ತಿಳಿಸಿದರು.

ಎರಡು ಕೋಟಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಕೆ. ಎಸ್. ಆರ್. ಟಿ.ಸಿ ಮುನಿಯಪ್ಪನರು ಹಾಸ್ಟೆಲ್ ಕೆಲಸ ಮಾಡಿರೋದು.ದಾನಿಗಳು ಹಾಗೂ ರಾಜಕಾರಣಿಗಳ ಅನುದಾನ ಮತ್ತು ಸರ್ಕಾರದ ಅನುದಾನಲ್ಲಿ ಕೆಲಸ ಆಗಿದೆ ಹೊರತು ಮುನಿಯಪ್ಪನವರು ಯಾರ ಬಳಿ ಯಾದರೂ ಹಣ ಮಂಜೂರು ಮಾಡಿಸಿದ್ದರೆ, ೫೦ ಸಾವಿರ ತಂದಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು

ಸಂಘದ ನಿರ್ದೇಶಕ ಸೋಮಶೇಖರ್ ಸಂಘವನ್ನು ಬೇರೆ ವ್ಯಕ್ತಿಗಳು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಅದು ತಪ್ಪು ನಮ್ಮಲ್ಲೇ ಕುತಂತ್ರಿಗಳು ಇದ್ದಾರೆ. ಎಂದ ಅವರು ಮುಂದಿನ ಕನಕ ಜಯಂತಿ ಒಳಗೆ ಹಾಸ್ಟೆಲ್ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande