ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ಅಗತ್ಯ
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ಅಗತ್ಯ
ಕೋಲಾರ ನಗರದ ಗಾಂಧಿನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.


ಕೋಲಾರ ೦೫ ಜೂ (ಹಿ.ಸ) :

ಆ್ಯಂಕರ್ : ಸಸಿಗಳನ್ನು ಹೆಚ್ಚಾಗಿ ನೆಡಬೇಕು. ಗಿಡ ಮರವಿದ್ದರೆ ನಾವು ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯ ಹಾಗೂ ಪ್ರಕೃತಿಯ ಸಮತೋಲನವನ್ನು ಕಾಪಾಡಬಹುದು ಎಂದು ಬಿ.ಆರ್.ಸಿ. ಕೋರ್ಡಿನೇಟರ್ ರಾಧಮ್ಮ ತಿಳಿಸಿದರು.

ಕೋಲಾರ ನಗರದ ಗಾಂಧಿನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಮಗುವೂ ಶಾಲಾ ಆವರಣದಲ್ಲಿ ಹಾಗೂ ತಮ್ಮ ಮನೆಗಳ ಸುತ್ತಮುತ್ತ ಕನಿಷ್ಠ ಒಂದೊAದು ಸಸಿಯನ್ನು ನೆಟ್ಟು, ಅದನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಹಸಿರು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದರು.

ಸಿ.ಆರ್.ಪಿ. ಹರೀಶ್ ಮಾತನಾಡಿ ಹವಾಮಾನ ವೈಪರಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಕಾಡುಗಳ ನಾಶ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನ ಏರುತ್ತಿದೆ. ಮಳೆ-ಬೆಳೆಗಳು ಸಕಾಲಕ್ಕೆ ಆಗದೆ ಇರಲು ನಮ್ಮ ನಿರ್ಲಕ್ಷ್ಯವೇ ಕಾರಣವಾಗಿದ್ದು, ಇಂದಿನಿ0ದಲೇ ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.

ಕಲಾವಿದ ಈನೆಲ ಈಜಲ ಬಿ.ವೆಂಕಟಾಚಲಪತಿ ರವರು ಸಂಸ್ಥೆಯ ಕಡೆಯಿಂದ ಎಲ್ಲಾ ಶಿಕ್ಷಕರಿಗೆ ಗಿಡಗಳನ್ನು ನೀಡಿ, ಉದುಗೂರು ಮೋಹನ್ ರಚಿಸಿರುವ ಪರಿಸರ ಗೀತೆಗಳನ್ನು ಹಾಡುತ್ತಾ, ನೆಲ ಜಲ ವನಗಳು ನಾವು, ನಿಮ್ಮ ಬದುಕಿಗೆ ಉಸಿರು ನಾವು, ನಮ್ಮ ರಕ್ಷಣೆ ನಿಮ್ಮ ಉಳಿವು ಮಾನವ ಓ ಮಾನವ ಎಂಬ ಗೀತೆಯನ್ನು ಹಾಡುತ್ತಾ ಪರಿಸರ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ. ಮುನಿರತ್ನಮ್ಮ, ಇಕೋ ಕ್ಲಬ್ ಶಿಕ್ಷಕಿ ಅರುಣಾ ಕೆ.ವಿ, ಸಹ ಶಿಕ್ಷಕರಾದ ಗೌರಮ್ಮ, ರಮಾದೇವಿ, ಪುಷ್ಪ.ಸಿ.ವಿ, ರೂಪ, ಉಷಾ, ಗಿರಿಜ, ಮಾರ್ಜೇನಹಳ್ಳಿ ವೀರಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande