
ಬಳ್ಳಾರಿ, 04 ಜೂನ್ (ಹಿ.ಸ.) :
ಆ್ಯಂಕರ್ : ತುಂಬಾ ಭಾರವಾದ ಹೃದಯದಿಂದ ಬಳ್ಳಾರಿ ಧರ್ಮಕ್ಷೇತ್ರದ ಹಿರಿಯ ಧರ್ಮಗುರುಗಳಾದ ಪೂಜ್ಯ ಫಾದರ್ ಆರ್ಚಿಬಾಲ್ಡ್ ಕೊರಿಯ (ಆರ್ಚಿ ಫಾದರ್) ಅವರ ನಿಧನರಾದರು.
86 ವರ್ಷ ವಯಸ್ಸಿನ ಪೂಜ್ಯರು ವಯೋಸಹಜ ಅನಾರೋಗ್ಯದಿಂದ 2026ರ ಜೂನ್ 3ರಂದು ಬುಧವಾರ ತಡರಾತ್ರಿ ನಿಧನರಾದರು.
ತಮ್ಮ ಸರಳ ಜೀವನ, ನಿಸ್ವಾರ್ಥ ಸೇವಾಭಾವ, ಅಚಲ ನಂಬಿಕೆ ಹಾಗೂ ಆಧ್ಯಾತ್ಮಿಕ ನಾಯಕತ್ವದ ಮೂಲಕ ಅವರು ಸಾವಿರಾರು ಭಕ್ತರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.
ಅವರ ಅಗಲಿಕೆ ಬಳ್ಳಾರಿ ಧರ್ಮಕ್ಷೇತ್ರಕ್ಕೆ ಹಾಗೂ ಸಮಸ್ತ ಕ್ರೈಸ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಪೂಜ್ಯರ ಪಾರ್ಥಿವ ಶರೀರವನ್ನು 2026ರ ಜೂನ್ 6ರಂದು ಶನಿವಾರ ಬೆಳಿಗ್ಗೆ 6.00 ಗಂಟೆಗೆ “ಬೆಥನಿ” ಗುರುಗಳ ವಿಶ್ರಾಂತ ನಿಲಯದಲ್ಲಿ ಹಾಗೂ ಬೆಳಿಗ್ಗೆ 8.00 ಗಂಟೆಯಿಂದ ಸಂತ ಅಂತೋನಿಯವರ ಪ್ರಧಾನ ದೇವಾಲಯ, ಕೌಲ್ ಬಜಾರ್, ಬಳ್ಳಾರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.
ಅವರ ಅಂತಿಮ ಸಂಸ್ಕಾರ ಮತ್ತು ಶ್ರದ್ಧಾಂಜಲಿ ವಿಧಿಗಳು ಅದೇ ದಿನ ಬೆಳಿಗ್ಗೆ 10.00 ಗಂಟೆಗೆ ಸಂತ ಅಂತೋನಿಯವರ ಪ್ರಧಾನ ದೇವಾಲಯದಲ್ಲಿ ನಡೆಯಲಿದ್ದು, ಬಳಿಕ ಕೌಲ್ ಬಜಾರ್ ಕ್ರೈಸ್ತರ ಸಮಾಧಿಯಲ್ಲಿ ಭೂಸಮಾಧಿ ಮಾಡಲಾಗುವುದು.
ಧರ್ಮಗುರುಗಳು, ಧಾರ್ಮಿಕ ಸಂಸ್ಥೆಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರದ ವಿಧಿಗಳಲ್ಲಿ ಭಾಗವಹಿಸಿ ಪೂಜ್ಯರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವಂತೆ ವಿನಂತಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್