ಜಲ್ಲಿ ಸಾಗಾಣಿಕೆಯ ಟಿಪ್ಪರ್ಗಳಿಂದ ರಸ್ತೆ ಹಾನಿ ಕ್ರಮಕ್ಕೆ ಒತ್ತಾಯ
ಜಲ್ಲಿ ಸಾಗಾಣಿಕೆಯ ಟಿಪ್ಪರ್ಗಳಿಂದ ರಸ್ತೆ ಹಾನಿ ಕ್ರಮಕ್ಕೆ ಒತ್ತಾಯ
ಜಲ್ಲಿ ಸಾಗಾಣಿಕೆ ಮಾಡುವ ಟಿಪ್ಪರ್ ಮತ್ತು ಲಾರಿಗಳಿಂದ ರಸ್ತೆಗಳು ಹಾಳಾಗಿವೆ.


ಕೋಲಾರ, ೪ ಜೂ (ಹಿ.ಸ)

ಆಂಕರ್ : ತಾಲ್ಲೂಕಿನ, ವೇಮಗಲ್ ಮತ್ತು ನರಸಾಪುರ ಭಾಗದಲ್ಲಿ ಜಲ್ಲಿ ಕ್ರಷರ್ಗಳ ಮೂಲಕ ಟಿಪ್ಪರ್ ಮತ್ತು ಲಾರಿಗಳಲ್ಲಿ ಅತಿ ಹೆಚ್ಚು ಟನ್ಗಳಷ್ಟು (ಬಾರಮಿತಿ) ಇಲ್ಲದೆ ಲೋಡುಗಳನ್ನು ತುಂಬಿಕೊ0ಡು ರಸ್ತೆಗಳನ್ನು ಹಾಳು ಮಾಡುತ್ತಿರುವ ಕ್ರಷರ್ಗಳ, ಟಿಪ್ಪರ್ ಮತ್ತು ಲಾರಿಗಳ ಮಾಲೀಕರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಂಯುಕ್ತರ0ಗದ ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಪ್ರಸಾದ್ ಅವರಿಗೆ ಗುರುವಾರ ಮನವಿ ನೀಡಿ ಒತ್ತಾಯಿಸಿದರು.

ದಲಿತ ಸಂಘಟನೆಗಳ ಸಂಯುಕ್ತ ರಂಗದ ಜಿಲ್ಲಾ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ತಾಲ್ಲೂಕಿನ ವೇಮಗಲ್ ಹೋಬಳಿ ಬೆಟ್ಟಹೊಸಪುರ ವ್ಯಾಪ್ತಿಯಲ್ಲಿ ಸ್ಥಾಪನೆಯಾದ ಜಲ್ಲಿ ಕ್ರಷರ್, ನರಸಾಪುರ ರಾಷ್ಟ್ರೀಯ ಹೆದ್ದಾರಿ ಚಾಕರಸನಹಳ್ಳಿ ಗ್ರಾಮಕ್ಕೆ ಹೊಂದಿಕೊAಡಿರುವ ಶ್ರೀ ಆಂಜನೇಯಸ್ವಾಮಿ ಸ್ಟೋನ್ ಕ್ರಷರ್, ಕೆ.ಬಿ.ಹೊಸಹಳ್ಳಿ ವ್ಯಾಪ್ತಿಯಲ್ಲಿ ಟಿಪ್ಪರ್ ಮತ್ತು ಲಾರಿಗಳಿಗೆ ಅತಿ ಹೆಚ್ಚು ಟನ್ಗಳಷ್ಟು ಬಾರಮಿತಿ ಇಲ್ಲದೆ ತುಂಬಿಕೊAಡು ವಾಹನಗಳು ರಸ್ತೆ ಮೇಲೆ ಓಡಾಡುವುದರಿಂದ ರಸ್ತೆಗಳು ಹಾಳಾಗಿವೆ. ಜಲ್ಲಿ ಮತ್ತು ಎಂ.ಸ್ಯಾ0ಡ್ ತುಂಬಿ ರಸ್ತೆಗಳಲ್ಲಿ ಹೋಗುವಾಗ ಯಾವುದೇ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸದೇ ಇರುವುದರಿಂದ ದ್ವಿಚಕ್ರ ಮತ್ತು ಬೇರೆ ಬೇರೆಯ ವಾಹನಗಳ ಸವಾರರ ಕಣ್ಣುಗಳಿಗೆ ದೂಳು ಮತ್ತು ಜಲ್ಲಿ ಕಲ್ಲುಗಳು ಬೀಳುವುದರಿಂದ ತುಂಬಾ ಅನಾನುಕೂಲವಾಗುತ್ತಿದೆ ಅವರು ಕಾನೂನನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಆದ್ದರಿಂದ ಕ್ರಷರ್, ಟಿಪ್ಪರ್, ಲಾರಿ ಮಾಲೀಕರ ವಿರುದ್ದ ಹಾಗೂ ಅತಿ ಹೆಚ್ಚು ಬಾರ ತುಂಬಿಕೊAಡು ಹೋಗುವ ವಾಹನಗಳ ಮೇಲೆ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಟಿಪ್ಪರ್ ಲಾರಿಗಳ ಹಾವಳಿಯಿಂದ ಸಾರ್ವಜನಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ ಇದರ ವಿರುದ್ದ ಸಾಕಷ್ಟು ಬಾರಿ ದೂರು ನೀಡಿದರು ಆರ್.ಟಿ.ಒ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದ್ದಾರೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಖಾಸಗಿ ಶಾಲಾ ಕಾಲೇಜುಗಳ ವಾಹನಗಳ ತಪಾಸಣೆ ಇಲ್ಲದೇ ಓಡಾಡುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಆರ್.ಟಿ.ಒ ಕಛೇರಿ ಮುಂದೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಖಾದ್ರಿಪುರ ಬಾಬು, ಅಪ್ಪಿ ನಾರಾಯಣಸ್ವಾಮಿ, ಕವಿ ನಾರಾಯಣಸ್ವಾಮಿ, ಮೋಚಿಪಾಳ್ಯ ನಾಗೇಶ್, ಕವಿ ನಾರಾಯಣಸ್ವಾಮಿ, ಅಂಬೇಡ್ಕರ್ ನಗರ ಮಂಜುನಾಥ್, ಚನಪನಹಳ್ಳಿ ನಾಗೇಶ್, ರಮೇಶ್ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande