
ಬಳ್ಳಾರಿ, 04 ಜೂನ್ (ಹಿ.ಸ.) :
ಆ್ಯಂಕರ್ : ಮಟ್ಟದ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಶ್ವ ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಪುನರ್ವಸತಿ, ಸಬಲೀಕರಣ, ಕೌಶಲ್ಯ, ಕ್ರೀಡೆ, ಅಭಿವೃಧಿ, ಉದ್ಯೋಗ ಸೃಷ್ಟೀ, ತಡೆರಹಿತ ವಾತವರಣ, ಸಂಶೋಧನೆ, ನಾವಿನ್ಯತೆ, ಹಾಗೂ ಇತೆರೆ ಕ್ಷೇತ್ರಗಳಲ್ಲಿ) ಗಣನೀಯ ಸೇವೆ ಸಲ್ಲಿಸಿದ ವಿಕಲಚೇತನರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಅರ್ಹ ನಿಗಧಿತ 1 ಮತ್ತು 2ರ ನಮೂನೆಯ ಎಲ್ಲಾ ಕಲಂಗಳನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15 ರೊಳಗಾಗಿ ದ್ವಿಪ್ರತಿಯಲ್ಲಿ ಪ್ರಸ್ತಾವನೆಯನ್ನು ಕಚೇರಿಗೆ ಸಲ್ಲಿಸಬಹುದಾಗಿದೆ ಹಾಗೂ ಅವಧಿ ಮೀರಿಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ www.dwdsc.karnataka.gov.in ಗೆ ಭೇಟಿ ನೀಡಿ ಪರಿಶೀಲಿಸಬಹುದು ಹಾಗೂ ಕಚೇರಿಯ ದೂ.08392-267886 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್