ಅರಣ್ಯ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸದಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಅರಣ್ಯ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸದಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿ ಶಿಳ್ಳಂಗೆರೆ ಹರಟಿ ಮಲ್ಲಂಡಹಳ್ಳಿ ಗ್ರಾಮಗಳ ಅರಣ್ಯ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಒತ್ತಾಯಿಸಿ ಭೂ ಸಂತ್ರಸ್ಥರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿರವರಿಗೆ ಮನವಿ ಸಲ್ಲಿಸಲಾಯಿತು.


ಕೋಲಾರ, ೦೪ ಜೂನ್ (ಹಿ.ಸ)

ಆಂಕರ್ : ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳ ಕುತಂತ್ರಕ್ಕೆ ಬಲಿಯಾದ ರೈತರ ಕಂದಾಯ ಭೂಮಿಗಳನ್ನು ಯಾವುದೇ ಕಾರಣಕ್ಕೂ ಎಸ್.ಐ.ಟಿಗೆ ನೀಡಬಾರದು ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್ ನೇತೃತ್ವದಲ್ಲಿ ಗುರುವಾರ ಮನವಿ ಮಾಡಿ ಒತ್ತಾಯಿಸಿದರು.

ಆರ್ ಶ್ರೀನಿವಾಸನ್ ಮಾತನಾಡಿ ಜಿಲ್ಲೆಯಲ್ಲಿ ನದಿಗಳಿಲ್ಲದೆ ಸ್ವತಂತ್ರ ಪೂರ್ವದಲ್ಲಿ ಮಹಾರಾಜರು ಕೊಟ್ಟಂತಹ ಕಂದಾಯ ಗೋಮಾಳ ಒಣ ಭೂಮಿಯಲ್ಲಿ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ನೂರಾರು ವರ್ಷಗಳಿಂದ ಆ ಭೂಮಿಗಳನ್ನು ಹದ ಮಾಡಿ ಈಗ ಸಮೃದ್ಧಿಗೆ ತಂದು ನೀರಾವರಿ ಗಿಡ ಮರ ಬೆಳೆಸಿದ್ದಾರೆ. ಇರುವಂತಹ ಸಮಯದಲ್ಲಿ ಏಕಾಏಕಿ ಅರಣ್ಯ ಇಲಾಖೆಯವರು ೧೯೩೧ ರಲ್ಲಿ ಮಾಡಿದಂತಹ ಜಿಲ್ಲಾಧಿಕಾರಿಗಳ ನೋಟಿಫಿಕೇಷನ್ ಗಳನ್ನು ಸುಪ್ರೀಂ ಕೋರ್ಟ್ ಆದೇಶ ಮಹಾರಾಜರ ಆದೇಶ ಕೇಂದ್ರ ಸರ್ಕಾರದ ಆದೇಶ ಎಂದು ಮೂರು ವಿಧವಿಧವಾದ ಆದೇಶವನ್ನು ತಂದು ರೈತರನ್ನು ಕಂದಾಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೋಲಾರ ತಾಲೂಕಿನ ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಳ್ಳಿ, ಕೋಟಿಗಾನಹಳ್ಳಿ, ಅಬ್ಬಣಿ, ಅರಳಕುಂಟೆ ಗ್ರಾಮಗಳ ಸುಮಾರು ೨೦೦ ಎಕರೆ ಅರಣ್ಯ ಜಮೀನುಗಳನ್ನು ನಾಶ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಯಾವುದು ಅರಣ್ಯ ಭೂಮಿ, ಯಾವುದು ರೈತರ ಭೂಮಿ ಎಂಬುದನ್ನು ಜಂಟಿ ಸರ್ವೆ ಮೂಲಕ ದೃಢೀಕರಿಸಿ ಎಂದು ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಜಂಟಿ ಸರ್ವೆಯಾಗಿದ್ದರೂ ವಿನಾಕಾರಣ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು,

ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಸುಮಾರು ಎರಡು ಲಕ್ಷ ಗಿಡ ಮರಗಳನ್ನು ನಾಶ ಮಾಡಿದ್ದಾರೆ. ಇದರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಬಡ ರೈತರ ಕಂದಾಯ ಒಣ ಭೂಮಿಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಯಾಮಾರಿಸಿ ಪೊಲೀಸರ ಬೆಂಗಾವಿಲಿನಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾನೂನು ಬಹಿರವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಇತರೆ ಹಿಂದುಳಿದ ಜನಾಂಗಗಳ ಭೂಮಿಗಳನ್ನು ನಾಶ ಮಾಡಿದ್ದಾರೆ ಕಂದಾಯ ಇಲಾಖೆಯವರು ಯಾವುದೇ ಕಾರಣಕ್ಕೂ ಕಂದಾಯ ಭೂಮಿಗಳನ್ನು ಅರಣ್ಯ ಭೂಮಿ ಎಂದು ತಪ್ಪಾಗಿ ಎಸ್.ಐ.ಟಿಗೆ ವರದಿ ನೀಡಬಾರದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್ ರವಿ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಸ್.ಥ.ಟಿ. ಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ವೆಂಕಟರವಣಪ್ಪ ಭಟ್ರಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande