ಹಳೆಯ ಕೃತಿಗಳ ಮರುಮುದ್ರಣಕ್ಕೆ ಇಲಾಖೆ ಕ್ರಮ
ಗದಗ, 04 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಿಂದೆ ಮುದ್ರಿತವಾಗಿ ಈಗ ಲಭ್ಯವಿಲ್ಲದಿರುವ ಪ್ರಮುಖ ಕನ್ನಡ ಕೃತಿಗಳನ್ನು ಮರುಮುದ್ರಣ ಮಾಡಲು ಮಹತ್ವದ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮರುಮುದ್ರಿಸಬೇಕಾದ ಕೃತಿಗಳ ಕುರಿತು ಸಾರ್ವಜನಿಕರಿಂದ ಕೋರಿಕೆ ಹಾಗೂ ಅಭಿಪ್ರಾಯಗಳನ್ನ
ಫೋಟೋ


ಗದಗ, 04 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಿಂದೆ ಮುದ್ರಿತವಾಗಿ ಈಗ ಲಭ್ಯವಿಲ್ಲದಿರುವ ಪ್ರಮುಖ ಕನ್ನಡ ಕೃತಿಗಳನ್ನು ಮರುಮುದ್ರಣ ಮಾಡಲು ಮಹತ್ವದ ಕ್ರಮ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಮರುಮುದ್ರಿಸಬೇಕಾದ ಕೃತಿಗಳ ಕುರಿತು ಸಾರ್ವಜನಿಕರಿಂದ ಕೋರಿಕೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವ ಮೂಲಕ ಇಲಾಖೆಯ ಮರುಮುದ್ರಣ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ಅಭಿಪ್ರಾಯಗಳು ಹಾಗೂ ಕೃತಿಗಳ ಕುರಿತ ಸಲಹೆಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರಿಂದ ದೊರೆಯುವ ಸಲಹೆಗಳ ಆಧಾರದಲ್ಲಿ ಪ್ರಮುಖ ಹಾಗೂ ಅಗತ್ಯವಾದ ಹಳೆಯ ಕನ್ನಡ ಕೃತಿಗಳನ್ನು ಮರುಮುದ್ರಿಸುವ ಯೋಜನೆಗೆ ಮುಂದಾಗಲಾಗುವುದು ಎಂದು ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande