ಬಳ್ಳಾರಿ : ಬೀಜ, ರಸಗೊಬ್ಬರ ಪೂರೈಸಲು ಆಗ್ರಹ
ಬಳ್ಳಾರಿ, 04 ಜೂನ್ (ಹಿ.ಸ.) : ಆ್ಯಂಕರ್ : ರೈತರಿಗೆ ಅಗತ್ಯವಿರುವ ಪ್ರಮಾಣದಷ್ಟು ಗುಣಮಟ್ಟದ ಬೀಜಗಳನ್ನು ಮತ್ತು ಯೂರಿಯಾವನ್ನು ಪೂರೈಸಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ರೈತ ಮುಖಂಡರ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟ
ಬಳ್ಳಾರಿ : ಬೀಜ – ರಸಗೊಬ್ಬರ ಪೂರೈಸಲು ಆಗ್ರಹ


ಬಳ್ಳಾರಿ : ಬೀಜ – ರಸಗೊಬ್ಬರ ಪೂರೈಸಲು ಆಗ್ರಹ


ಬಳ್ಳಾರಿ, 04 ಜೂನ್ (ಹಿ.ಸ.) :

ಆ್ಯಂಕರ್ : ರೈತರಿಗೆ ಅಗತ್ಯವಿರುವ ಪ್ರಮಾಣದಷ್ಟು ಗುಣಮಟ್ಟದ ಬೀಜಗಳನ್ನು ಮತ್ತು ಯೂರಿಯಾವನ್ನು ಪೂರೈಸಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ರೈತ ಮುಖಂಡರ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಪ್ರಾರಂಭವಾಗಿದೆ. ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಸರ್ಕಾರ ರೈತರಿಗೆ ಅಗತ್ಯವಾಗಿರುವ ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಕೆ ಮಾಡಬೇಕು. ಗುಣಮಟ್ಟದ ಬೀಜವನ್ನು ನೀಡಬೇಕು. ರೈತರು ಬೀಜ ಮತ್ತು ರಸಗೊಬ್ಬರಕ್ಕಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.

ಸಂಘದ ಜಿಲ್ಲಾ ಅಧ್ಯಕ್ಷರಾಗಿರುವ ಗೋವಿಂದ್, ಜಿಲ್ಲಾ ಕಾರ್ಯದರ್ಶಿಗಳಾದ ಗುರಳ್ಳಿರಾಜ, ಜಂಟಿ ಕಾರ್ಯದರ್ಶಿಗಳಾದ ಕಾಸಿಂಸಾಬ್, ಕುರುಗೋಡು ತಾಲ್ಲೂಕು ಅಧ್ಯಕ್ಷ ಲಿಂಗಪ್ಪ, ರೈತರಾದ ಚನ್ನಪ್ಪ, ಹನುಮಂತ, ಪೋತಯ್ಯ, ಸಂಜೀವಪ್ಪ, ಹೊನ್ನುರಸ್ವಾಮಿ ಸೇರಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande