ಭಾಗ್ಯನಗರದ ವ್ಯಕ್ತಿ ನಾಪತ್ತೆ
ಕೊಪ್ಪಳ, 04 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರ ಸಮೀಪದ ಭಾಗ್ಯನಗರ ನಿವಾಸಿ ಲೋಕೇಶ ತಂದೆ ಜನಾರ್ಧನ ದೇವಸೂಗೂರಕರ್ (35) ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ವ್ಯಕ್ತಿಯು 2026ರ ಏಪ್ರಿಲ್ 28ರಂದು ಬೆ
ಭಾಗ್ಯನಗರದ ವ್ಯಕ್ತಿ ಕಾಣೆ: ಪತ್ತೆಗೆ ಮನವಿ


ಕೊಪ್ಪಳ, 04 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರ ಸಮೀಪದ ಭಾಗ್ಯನಗರ ನಿವಾಸಿ ಲೋಕೇಶ ತಂದೆ ಜನಾರ್ಧನ ದೇವಸೂಗೂರಕರ್ (35) ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ವ್ಯಕ್ತಿಯು 2026ರ ಏಪ್ರಿಲ್ 28ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಕಾರು ಸಂಖ್ಯೆ ಕೆಎ-37/ಪಿ-2111 ರಲ್ಲಿ ಕಂಪನಿ ಕೆಲಸ ಇಲ್ಲಾ ಹುಲಿಗಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋಗಿದ್ದು, ಮನೆಗೆ ವಾಪಸ್ಸಾಗಿರುವುದಲ್ಲ. ಮೊಬೈಲ್ ನಂಬರ್ಗೆ ಕರೆ ಮಾಡಿದರು ಸ್ವೀಚ್ ಆಫ್ ಅಂತ ಬಂದಿದ್ದು, ರಾಯಚೂರು, ಮುದುಗಲ್, ಬೀದರ್, ಹೊಸಪೇಟೆ, ಬಳ್ಳಾರಿ, ಗಿಣಿಗೇರಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಸಹೋದರ ಪ್ರವೀಣ್ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸರು ಗುನ್ನೆ ಸಂಖ್ಯೆ 54/2026ರಡಿ ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ: ಲೋಕೇಶ ತಂದೆ ಜನಾರ್ಧನ ದೇವಸೂಗೂರಕರ್ ವಯಸ್ಸು 35 ವರ್ಷ, 5.6 ಅಡಿ ಎತ್ತರ, ಸಧೃಡ ಮೈಕಟ್ಟು, ದುಂಡು ಮುಖ ಹೊಂದಿದ್ದು, ತಲೆಯಲ್ಲಿ ಕಪ್ಪು ಕೂದಲು ಹಾಗೂ ಕುರುಚಲು ದಾಡಿ ಹೊಂದಿದ್ದಾರೆ. ಕಾಣೆಯಾದಾಗ ಬಿಳಿ ಬಣ್ಣದ ಹಾಫ್ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಯಾವುದೇ ಮಾಹಿತಿ ಲಭ್ಯವಾದಲ್ಲಿ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08539-230100/ 230222, ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಮೊ.ಸಂ: 9480803745 ಅಥವಾ ಕೊಪ್ಪಳ ನಗರ ಠಾಣೆ ದೂರವಾಣಿ ಸಂಖ್ಯೆ 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande