
ಬೆಂಗಳೂರು, 30 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಚುನಾವಣಾ ಆಯೋಗ ಎಸ್ ಐಅರ್ ಆರಂಭಿಸಿದ್ದು ಮೊದಲನೆ ಹಂತ ಬಿಎಲ್ ಒ ಗಳು ಮನೆ ಮನೆಗೆ ಬಂದು ಫಾರ್ಮ್ 6 ವಿತರಣೆ ಮಾಡುವ ಕಾರ್ಯಕ್ರಮ ಆರಂಭ ಆಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಗಳಿವೆ. ಆದ್ದರಿಂದ ಬಿಜೆಪಿ ಬಿಎಲ್ ಎ 2 ಗಳು ಅತ್ಯಂತ ಜಾಗೃತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿನಂತಿ ಮಾಡಿಕೊಂಡಿದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ನಮ್ಮ ಪಕ್ಷದ ಎಲ್ಲ ಬಿಎಲ್ ಎ 2 ಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ ಬಿಎಲ್ ಒ ಗಳ ಜೊತೆಗೆ ಪ್ರತಿ ಬೂತ್ ನಲ್ಲಿ ನಮ್ಮ ಬಿಎಲ್ ಎ 2 ಗಳು ಪಾರ್ಮ್ ನಂಬರ್ 6 ವಿತರಣೆಯಾಗುವಂತೆ ನೊಡಿಕೊಳ್ಳಬೇಕು ಮತ್ತು ಅವುಗಳನ್ನು ಸರಿಯಾದ ರೀತಿ ಭರ್ತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಮೊದಲನೆ ಹಂತದ ಈ ಕಾರ್ಯಕ್ರಮ ನಡೆಸುತ್ತಿರುವುದು ರಾಜ್ಯ ಸರ್ಕಾರದ ಅಧಿಕಾರಿಗಳು. ರಾಜ್ಯದ ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿರಂತರವಾಗಿ ಹೇಳಿಕೆ ಕೊಡುತ್ತಿರುವುದು ನೋಡಿದಾಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕುತ್ತಿದ್ದಾರೆ. ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಗಳಿವೆ. ಆದ್ದರಿಂದ ನಮ್ಮ ಬಿಎಲ್ ಎ 2 ಗಳು ಅತ್ಯಂತ ಜಾಗೃತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಫಾರ್ಮ್ ನಂಬರ್ 6 ಹಂಚುವಿಕೆ, ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ನೋಡುವುದು, ಅನರ್ಹ ಮತದಾರರ ಹೆಸರು ಸೇರಿಸದಂತೆ ನೋಡುವುದು ಮುಂದಿನ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿನಂತಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.