
ಕೊಪ್ಪಳ, 30 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಜುಲೈ 1 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರದ ಭಾಗ್ಯನಗರ ರಸ್ತೆಯ ಶ್ರೀಮತಿ ಭಾಗ್ಯಮ್ಮ ಭೀಮಸೇನಪ್ಪ ಪಾನಘಂಟಿ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ್ ತಿಳಿಸಿದೆ.
ಹಿರಿಯ ಪತ್ರಕರ್ತರು ಹಾಗೂ ರಾಜಕೀಯ ವಿಶ್ಲೇಷಕರಾದ ಹೊನಕೆರೆ ನಂಜುಂಡೇಗೌಡ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ದೇವು ನಾಗನೂರ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಅವರು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುವರ್ಣ ನ್ಯೂಸ್ ಪೆÇಲಿಟಿಕಲ್ ಬ್ಯೂರೋ ಹೆಡ್ ಆನಂದ ಬೈದನಮನೆ ಅವರಿಗೆ ಕೊಪ್ಪಳ ಮೀಡಿಯಾ ಕ್ಲಬ್ ವಾರ್ಷಿಕ ಪ್ರಶಸ್ತಿ-2026 (ಅನ್ವಿತಾ ಮಹಿಳೆಯರ-ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ), ರೇವಣಕಿ ಪ್ರಾಯೋಜಿತ) ನೀಡಲಾಗುವುದು. ವಿಶ್ವವಾಣಿ ದಿನ ಪತ್ರಿಕೆಯ ಜಿಲ್ಲಾ ವರದಿಗಾರರಾದ ಶರಣಬಸವ ಹುಲಿಹೈದರ ಮತ್ತು ಸಾಧಕರಾದ ಕಂಟ್ರೀ ಆಫ್ ಹೆವೆನ್ ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಪ್ರಕಾಶ ಕಂದಕೂರ, 2026ರ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ವಿಜೇತರಾದ ನಾಭಿರಾಜ ದಸ್ತೇನವರ ಹಾಗೂ ರಾಷ್ಟ್ರಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಭರತ್ ಕಂದಕೂರ ಅವರಿಗೆ ಸನ್ಮಾನಿಸಲಾಗುವುದು. ಕೊಪ್ಪಳ ಮೀಡಿಯಾ ಕ್ಲಬ್ನ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್