ಎಸ್ಐಆರ್ಗೆ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು : ಅಶೋಕ್
ಬೆಂಗಳೂರು, 30 ಜೂನ್ (ಹಿ.ಸ.) : ಆ್ಯಂಕರ್ : ಎಸ್ಐಆರ್ ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಬಿಎಲ್ಒ ಗಳನ್ನು ನೇಮಿಸಲು ಕೂಡ ಅಡ್ಡಗಾಲು ಹಾಕಿದೆ. ಅನೇಕ ಕಡೆ ಅಧಿಕಾರಿಗಳನ್ನು ನೇಮಿಸದೆ ಎಸ್ಐಆರ್ ನಡೆಯದಂತೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ
ಅಶೋಕ


ಬೆಂಗಳೂರು, 30 ಜೂನ್ (ಹಿ.ಸ.) :

ಆ್ಯಂಕರ್ : ಎಸ್ಐಆರ್ ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಬಿಎಲ್ಒ ಗಳನ್ನು ನೇಮಿಸಲು ಕೂಡ ಅಡ್ಡಗಾಲು ಹಾಕಿದೆ. ಅನೇಕ ಕಡೆ ಅಧಿಕಾರಿಗಳನ್ನು ನೇಮಿಸದೆ ಎಸ್ಐಆರ್ ನಡೆಯದಂತೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಆರಂಭವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಿಎಲ್ಒಗಳನ್ನು ಸರಿಯಾಗಿ ನೇಮಿಸಿಲ್ಲ. ಮೂವತ್ತು ಬಿಎಲ್ಒ ಇರಬೇಕಾದಲ್ಲಿ ಕೇವಲ ಹತ್ತು ಮಂದಿ ಕಾಣಿಸುತ್ತಿದ್ದಾರೆ. ಸರ್ಕಾರ ಟಿಎ, ಡಿಎ ನೀಡಿಲ್ಲ, ಹಾಜರಾಗಲು ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ದೂರಿದರು.

ಮತದಾರರ ಪಟ್ಟಿಯಲ್ಲಿ ನಿಜವಾದ ಮತದಾರರ ಹೆಸರು ಮಾತ್ರ ಇರಬೇಕೆಂಬುದು ಎಸ್ಐಆರ್ ನ ಉದ್ದೇಶ. ಜಯನಗರದಲ್ಲಿ ಇಪ್ಪತ್ತು ಕಡೆ ಅಧಿಕಾರಿ ಅಲ್ಲದ ಕಾಂಗ್ರೆಸ್ ಮುಖಂಡರನ್ನು ಬಿಎಲ್ಒ ಆಗಿ ನೇಮಿಸಲಾಗಿದೆ. ಚಾಮರಾಜಪೇಟೆಯಲ್ಲಿ ಮನೆ ಮನೆಗೆ ಹೋಗುವಾಗ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಫೋಟೊ ತೋರಿಸಿದ್ದಾರೆ. ಬಿಎಲ್ಒ ಗಳು ಯಾವುದೇ ಪಕ್ಷದ ಗುರುತು ತೋರಿಸಬಾರದು ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande