
ಕೋಲಾರ, ೦೩ ಜೂನ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ' ಅನ್ನು ಕೈಗೊಳ್ಳಲಾಗಿದ್ದು, ಅಕ್ಟೋಬರ್ ೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ೦೧-೧೦-೨೦೨೬ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ೩ನೇ ಹಂತದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಿದ್ದತೆ ಹಾಗಊ ಬಿಎಲ್ಒ ಗಳಿಗೆ ತರಬೇತಿ ೨೦-೦೬-೨೦೨೬ ರಿಂದ ೨೯-೦೬-೨೦೨೬ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ: ೩೦-೦೬-೨೦೨೬ ರಿಂದ ೨೯-೦೭-೨೦೨೬ ರವರೆಗೆ
ಮತಗಟ್ಟೆಗಳ ರಾಷನ ಲೈಸೇಷನ್: ೨೯-೦೭-೨೦೨೬, ಕರಡು ಮತದಾರರ ಪಟ್ಟಿಯ ಪ್ರಕಟಣೆ: ೦೫-೦೮-೨೦೨೬, ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ಸಲ್ಲಿಕೆ: ೦೫-೦೮-೨೦೨೬ ರಿಂದ ೦೪-೦೯-೨೦೨೬ ರವರೆಗೆ, ವಿಲೇವಾರಿ ಹಂತ: ೦೫-೦೮-೨೦೨೬ ರಿಂದ ೦೩-೧೦-೨೦೨೬ ರವರೆಗೆ, ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ: ೦೭-೧೦-೨೦೨೬ ರಂದು ನಡೆಯಲಿದೆ.
ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ (ಶ್ರೀನಿವಾಸಪುರ, ಮುಳಬಾಗಿಲು, ಕೆ.ಜಿ.ಎಫ್, ಬಂಗಾರಪೇಟೆ, ಕೋಲಾರ, ಮಾಲೂರು) ವ್ಯಾಪ್ತಿಯಲ್ಲಿ ಒಟ್ಟು ೧೫೩೮ ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೧೨,೯೪,೭೧೭ ಮತದಾರರಿದ್ದಾರೆ. ಇದರಲ್ಲಿ ೬,೩೭,೦೦೦ ಪುರುಷರು, ೬,೫೭,೫೭೨ ಮಹಿಳೆಯರು ಮತ್ತು ೧೪೫ ತೃತೀಯ ಲಿಂಗಿ ಮತದಾರರಿದ್ದಾರೆ. ಈ ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು ೧೫೩೮ ಮತಗಟ್ಟೆ ಹಂತದ ಅಧಿಕಾರಿಗಳನ್ನು (ಬಿ.ಎಲ್.ಒ) ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಬಿ.ಎಲ್.ಒ ಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಯಾವ ಮತದಾರರು ಗಣತಿ ನಮೂನೆಯಲ್ಲಿ ವಿವರಗಳನ್ನು ನಮೂದಿಸಿ, ಸಹಿ ಮಾಡಿ ಬಿ.ಎಲ್.ಒ ಗಳಿಗೆ ಹಿಂದಿರುಗಿಸುವುದಿಲ್ಲವೋ, ಅಂತಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಕನಿಷ್ಠ ಮೂರು ಬಾರಿಯಾದರೂ ಇವರು ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಸಾರ್ವಜನಿಕರು ವೋರ್ಸ್ ಪೋರ್ಟಲ್ ಮೂಲಕ ಮತದಾರರ ಗಣತಿ ನಮೂನೆಯನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ವಿವಿರಗಳನ್ನು ಸಹಿ ಮಾಡಿ ಸಂಬAಧ ಬಿ.ಎಲ್.ಒ ರವರಿಗೆ ಸಲ್ಲಿಸಬಹುದಾಗಿದೆ.
ನಮೂನೆ ನೀಡದ ಮತದಾರರನ್ನು ಎ.ಎಸ್.ಡಿ (ಗೈರು ಹಾಜರಿ/ಸ್ಥಳಾಂತರಗೊ0ಡ/ಮರಣ) ಎಂದು ಪರಿಗಣಿಸಿ, ಅಂತಹ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗುವುದು.
ದಿನಾಂಕ ೦೧-೧೦-೨೦೨೬ ಕ್ಕೆ ೧೮ ವರ್ಷ ತುಂಬುವ ಯುವ ಮತದಾರರು ಹಕ್ಕು ಮತ್ತು ಆಕ್ಷೇಪಣಾ ಅವಧಿಯಲ್ಲಿ ನಮೂನೆ-೦೬ ಅನ್ನು ದೃಢೀಕರಣದೊಂದಿಗೆ ಬಿ.ಎಲ್.ಒ ರವರಿಗೆ ಸಲ್ಲಿಸಬಹುದು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಆಧಾರ್ ಅನ್ನು ಕೇವಲ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುವುದು; ಇದು ಪೌರತ್ವ, ವಿಳಾಸ ಅಥವಾ ಜನ್ಮ ದಿನಾಂಕದ ಪ್ರಮಾಣವಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರಿಗೆ ಸಹಾಯ ಮಾಡಲು ಹಾಗೂ ಗೊಂದಲಗಳನ್ನು ಪರಿಹರಿಸಲು ಸಂಬAಧಪಟ್ಟ ಮತಗಟ್ಟೆಗಳಲ್ಲಿ 'ವೋಟರ್ ಫೆಸಿಲಿಟೇಷನ್ ಸೆಂಟರ್' ಗಳನ್ನು ಸ್ಥಾಪಿಸಲಾಗುವುದು ಹಾಗೂ ಇದರ ಮೇಲ್ವಿಚಾರಣೆಯನ್ನು ಬಿ.ಎಲ್.ಒ ಗಳು ಮಾಡಲಿದ್ದಾರೆ. ಇದರ ಜೊತೆಗೆ, ಜಿಲ್ಲೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸಲು ೬೩೭ ಚುನಾವಣಾ ಸಾಕ್ಷರತಾ ಕ್ಲಬ್ಗಳು, ೫೮೧ ಮತದಾರರ ಜಾಗೃತಿ ವೇದಿಕೆಗಳು ಹಾಗೂ ೧೫೩೮ ಚುನಾವ್ ಜಾಗೃತಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಈಗಾಗಲೇ ಒಟ್ಟು ೧೬೫೦ ಬೂತ್ ಮಟ್ಟದ ಏಜೆಂಟರನ್ನು (ಬಿ.ಎಲ್.ಎ) ನೇಮಕ ಮಾಡಲಾಗಿದ್ದು, ಪ್ರತಿಯೊಂದು ಮತಗಟ್ಟೆಗೂ ಬಿ.ಎಲ್.ಎ ಗಳನ್ನು ನೇಮಿಸುವಂತೆ ರಾಜಕೀಯ ಪಕ್ಷಗಳಿಗೆ ಕೋರಲಾಗಿದೆ. ಬಿ.ಎಲ್.ಒ ಗಳು ಮನೆ ಮನೆಗೆ ಭೇಟಿ ನೀಡುವಾಗ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ, ಈ ಪರಿಷ್ಕರಣಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ಸಂದರ್ಭದಲ್ಲಿ ಮನವಿ ಮಾಡಿದರು.
ಅಲ್ಲದೆ ಯಾವೊಬ್ಬ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಹಾಗೂ ಅನರ್ಹ ಮತದಾರರು ಮತಪಟ್ಟಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳವುದು ಸಹ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮ0ಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ಹಾಗೂ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್