

ಕೂಡ್ಲಿಗಿ, 03 ಜೂನ್ (ಹಿ.ಸ.) :
ಆ್ಯಂಕರ್ : ಚಿಕ್ಕಜೋಗಿಹಳ್ಳಿ ಕರ್ನಾಟಕ ರಾಜ್ಯದಲ್ಲಿಯೇ ಸದಾಕಾಲ ವಿಶೇಷ ಗಮನ ಸೆಳೆಯುತ್ತಲೇ ಇರುತ್ತದೆ. ಕಾಂಗ್ರೆಸ್ ಪಾಳಯದಲ್ಲಿ ಚಿರಪರಿಚಿತವಾಗಿದ್ದ ಚಿಕ್ಕಜೋಗಿಹಳ್ಳಿ ಇಂದಿರಾ ಗಾಂಧಿ ಅವರ ಆಪ್ತ ಗ್ರಾಮ. ಈಗ, ತೋಟಗಾರಿಕೆ ಕ್ಷೇತ್ರದಲ್ಲೂ ಖ್ಯಾತಿಯನ್ನು ಪಡೆದು ನಾಡಿನ ಗಮನ ಸೆಳೆದಿದೆ. ಅದರಲ್ಲೂ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಜೂನ್ 5ರ ಶುಕ್ರವಾರ ಈ ಪುಟ್ಟ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಮತ್ತೊಮ್ಮೆ ಖ್ಯಾತಿ ಪಡೆದಿದೆ.
ಜಪಾನ್ ಮಾದರಿಯ ‘ಮಿಯಾವಾಕಿ’ ತೋಟಗಾರಿಕೆ ಬೆಳೆಗಳ ಅರಣ್ಯೀಕರಣಕ್ಕೆ ಇಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ. ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಕಿರು ಅರಣ್ಯ ಯೋಜನೆಯಡಿ ತಾಲೂಕಿನ ಬಂಜರು, ಅನುತ್ಪಾದಕ ಹಾಗೂ ನಿರ್ಲಕ್ಷಿತ ಭೂಮಿ, ಸರ್ಕಾರಿ ಭೂಮಿಯಲ್ಲಿ ಹಾಗೂ ಆಸಕ್ತ ರೈತರ ಜಮೀನುಗಳಲ್ಲಿ ಹುಣಸೆ, ಬೇಲ, ನೆಲ್ಲಿ, ನೇರಳೆ, ಕವಳೆ, ಚರ್ರಿ, ನಿಂಬೆ ಹಾಗೂ ಹಸಿರೆಲೆ ಗೊಬ್ಬರದ ಮರಗಳನ್ನು ಯಥೇಚ್ಛವಾಗಿ ಬೆಳೆಸಲು ಸಾಕಷ್ಟು ಯಶಸ್ವಿ ಪ್ರಯತ್ನಗಳು ನಡೆದಿವೆ.
ಬೇವು, ಹೊಂಗೆ ಸೇರಿದಂತೆ ಹತ್ತು ರೀತಿಯ ವಿಧದ 1 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಇಲ್ಲಿಯ ಅರಣ್ಯ ಇಲಾಖೆ ಹೊಂದಿದೆ. ಕಿರು ಅರಣ್ಯ ಯೋಜನೆಯ ಮೊದಲ ಹಂತದಲ್ಲಿ ತೋಟಗಾರಿಕೆ ಇಲಾಖೆಯ ಚಿಕ್ಕಜೋಗಿಹಳ್ಳಿಯ 10 ಎಕರೆಗೂ ಹೆಚ್ಚಿನ ಭೂಮಿಯಲ್ಲಿ 15 ಸಾವಿರ ಸಸಿಗಳನ್ನು ನೆಡುವುದಕ್ಕಾಗಿ ಸಿದ್ಧತೆ ನಡೆದಿದ್ದು, ಕೇಂದ್ರ ಆರ್ಥಿಕ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ ಚಾಲನೆ ಸಿಗಲಿದೆ.
ಜೂನ್ 5ರ ಶುಕ್ರವಾರ ಆಯೋಜನೆಗೊಂಡಿರುವ ಪರಿಸರ ದಿನಾಚರಣೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಭಾಗವಹಿಸಲಿದ್ದು, ಬಯಲು ಸೀಮೆಯ ತಾಲೂಕಿನಾದ್ಯಂತ 1 ಲಕ್ಷ ಸಸಿ ನೆಡುವಂಥ `ಕಿರು ಕಾಡು' ಬೆಳೆಸುವ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರು ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿದ್ದು, ಈಗ ಮತ್ತೊಮ್ಮೆ ಈ ಊರು ದೊಡ್ಡ ಸುದ್ದಿಯಾಗುತ್ತಿದೆ. ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಕೇಂದ್ರ ಸಚಿವರ ಭೇಟಿಯ ಯಶಸ್ವಿಗಾಗಿ ಸಿದ್ದತೆಗಳು ನಡೆದಿವೆ.
ವಿಶ್ವದ ಅತಿದೊಡ್ಡ ಕಾಡು ಮಿಯಾವಾಕಿ ರೂಪಿಸಿರುವ `ಗ್ರೀನ್ ಹೀರೋ ಆಫ್ ಇಂಡಿಯಾ'ದ ಡಾ. ಆರ್.ಕೆ. ನಾಯರ್ ಅವರು ಕೂಡ್ಲಿಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯದ ಮೊದಲ ಅತಿದೊಡ್ಡ ಕಿರು ಕಾಡು ಬೆಳೆಸುವಂಥ ನೇತೃತ್ವ ವಹಿಸಿದ್ದಾರೆ.
ತಾಲೂಕಿನಲ್ಲಿ 300 ಎಕರೆಯಷ್ಟು ಅರಣ್ಯೀಕರಣಕ್ಕೆ ಯೋಜನೆ ರೂಪಿಸಿ, ಪ್ರತೀ ವರ್ಷ 50 ಸಾವಿರದಂತೆ 2 ವರ್ಷಗಳಲ್ಲಿ ಒಟ್ಟು 1 ಲಕ್ಷ ತೋಟಗಾರಿಕೆ ಬೆಳೆಗಳ ಸಸಿಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯನ್ನು ದೇಶದ ನಾನಾ ಕಂಪನಿಗಳಿಂದ ಲಭ್ಯವಾಗುವ ‘ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ’ ಹಣದಲ್ಲಿ ‘ಎನ್ವಿರೋ ಫಾರೆಸ್ಟ್ ಕ್ರಿಯೇಟರ್ಸ್ ಸಂಸ್ಥೆ’ಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಹದಿನೈದು ಸಾವಿರ ಗಿಡಗಳನ್ನು ಎಸ್ಎಂಸಿಐಎಲ್ ಪ್ರಿಂಟಿಂಗ್ ಕಂಪನಿಯು ತನ್ನ ಸಿಎಸ್ಆರ್ ನಿಧಿಯ ಪ್ರಾಯೋಜಕತ್ವವನ್ನು ಪಡೆದಿದೆ. ಈ ಕಂಪನಿಯು ಐದು ವರ್ಷಗಳ ಕಾಲ ರೈತರಿಗೆ ಹಣಕಾಸು ಮತ್ತು ನಿರ್ವಹಣೆ, ಮಾರುಕಟ್ಟೆಯ ಸಮಗ್ರ ಜವಾಬ್ದಾರಿಯನ್ನು ಪಡೆದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಳಿಯ ಹುಣಸೆ ಹಾಗೂ ಶೇಂಗಾ ಸಂಸ್ಕರಣ ಘಟಕ ಉದ್ಘಾಟನೆಗೆ 2025ರ ಸೆಪ್ಟಂಬರ್ 17ರಂದು ಆಗಮಿಸಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಶಾಸಕ ಡಾ.
ಎನ್.ಟಿ. ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿ, ಕೂಡ್ಲಿಗಿ ತಾಲೂಕಿನಲ್ಲಿ 1 ಲಕ್ಷ ಸಸಿಗಳನ್ನು ನೆಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕೇವಲ 8 ತಿಂಗಳಲ್ಲೇ ಜಪಾನಿ ಮಾದರಿಯ `ಮಿಯಾವಾಕಿ' ಮಾದರಿಯಲ್ಲಿ ಕಿರು ಅರಣ್ಯ ನಿರ್ಮಾಣಕ್ಕೆ ಮುಂದಾಗಿರುವುದು ಅನೇಕರಲ್ಲಿ ಮೆಚ್ಚುಗೆ ಮೂಡಿಸಿದೆ.
`ಗ್ರೀನ್ ಹೀರೋ ಆಫ್ ಇಂಡಿಯಾ' ಪ್ರಶಸ್ತಿ ಪುರಸ್ಕøತ, ಡಾ. ಆರ್.ಕೆ. ನಾಯರ್ ಅವರು, ಕರ್ನಾಟಕ ರಾಜ್ಯದ ಬಯಲುಸೀಮೆ ಕೂಡ್ಲಿಗಿ ತಾಲೂಕಿನಲ್ಲಿ ಸಿಎಸ್ಆರ್ ನಿಧಿ ಅಡಿಯಲ್ಲಿ ಈ ಭಾಗದ ಹವಾಗುಣಕ್ಕೆ ಪೂರಕವಾದ
ಹಣ್ಣುಗಳ ಸಸಿಗಳು ಸೇರಿ 1 ಲಕ್ಷ ಸಸಿಗಳನ್ನು 2 ವರ್ಷಗಳಲ್ಲಿ ನೆಡಲಾಗುವುದು. ದೇಶದಲ್ಲಿಯೇ ದೊಡ್ಡಮಟ್ಟದ ಕಾಡು ಕೃಷಿಯ ‘ಭಾರತವನ’ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್