
ಬಳ್ಳಾರಿ, 03 ಜೂನ್ (ಹಿ.ಸ.) :
ಆ್ಯಂಕರ್ : ಮಂಗಳವಾರ ಸಂಜೆ ಸುರಿದ ಮಳೆಯಿಂದ ತತ್ತರಿಸಿರುವ ಬಳ್ಳಾರಿ ನಗರ ನಾಗರಿಕರು ಬುಧವಾರ ಸಂಜೆ ಮತ್ತೊಮ್ಮೆ ಒಂದೂವರೆ ತಾಸು ಭಾರಿ ಗುಡುಗು - ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು.
ನಗರಾದ್ಯಂತ ಗಿಡಮರಗಳು - ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ಅಲ್ಲದೇ, ನಾಗರೀಕರಿರು ತತ್ತರಿಸಿದರು.
ಮಂಗಳವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಸುರಿದ ಮಳೆ ಸಾಕಷ್ಟು ತೊಂದರೆ ನೀಡಿತ್ತು. ಅದೇ ರೀತಿಯಲ್ಲಿ ಬುಧವಾರ ಸಂಜೆ 4.10 ರಿಂದ ಪ್ರಾರಂಭವಾಗಿರುವ ಮಳೆಯು 6 ಗಂಟೆ ಆದರೂ ಧಾರಾಕಾರವಾಗಿ ಸುರಿಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್