
ಕೊಪ್ಪಳ, 03 ಜೂನ್ (ಹಿ.ಸ.) :
ಆ್ಯಂಕರ್ : ಗವಿಶ್ರೀ ನಗರದಲ್ಲಿರುವ ಸಹಸ್ರಾಂಜನೇಯ ದೇವಸ್ಥಾನದ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಬಾಗಿನ ಕೊಡುವ ಪದ್ಧತಿಯಂತೆ 33 ದಂಪತಿಗಳಿಗೆ ಶ್ರೀ ಸಹಸ್ರಾಂಜನೇಯ ಗುರುವಿನ ಪ್ರೇರಣೆಯಿಂದ ಈ ಅಧಿಕ ಮಾಸದ ಕೊನೆಯ ಶನಿವಾರ ಜೂನ್ 13 ರಂದು ಬೆಳಿಗ್ಗೆ 9 ಗಂಟೆಗೆ ಜರುಗುವ ವಿಶೇಷ ಪೂಜೆಯಲ್ಲಿ ಬಾಗಿನ ಕೊಡಲಾಗುವದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ತಮ್ಮ ಮನೆಯಲ್ಲಿ ಶ್ರೀ ಆಂಜನೇಯ ಪ್ರತಿಮೆಯನ್ನು ಪೂಜಿಸಲು ಇಚ್ಚಿಸುವಂಥ 33 ದಂಪತಿಗಳಿಗೆ ಆಮಂತ್ರಣ ಬಾಗಿನ ಕೊಡುವ ಪದ್ಧತಿಯಂತೆ ಈ ಬಾರಿ ಅಜ್ಜನ ಸನ್ನಿಧಿಯಿಂದ ಪ್ರತಿಮೆಯನ್ನು ಪೂಜಿಸಲು ಅವರಿಗೆ ಆಶೀರ್ವಾದ ರೂಪದಲ್ಲಿ ಉಡುಗೊರೆಯಾಗಿ ಕೊಟ್ಟು ಹಾರೈಸಲಾಗುವದು.
ಸದರಿ ಆಸಕ್ತ ದಂಪತಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಇಲ್ಲವೇ ಖುದ್ದಾಗಿ ಭೇಟಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಕಡ್ಡಾಯವಾಗಿ ಅಂದು ಅವರು ಆಗಮಿಸಬೇಕು ಹಾಗೂ ಹನುಮನ ವಿಗ್ರಹ ಪೂಜೆ ಮಾಡುವ ಕುಟುಂಬಗಳು ಮಾತ್ರ ಹೆಸರು ನೊಂದಾಯಿಸಿಕೊಳ್ಳಬೇಕು. ಈ ಒಂದು ಸೇವೆಗೆ ಯಾವುದೇ ತರಹದ ಶುಲ್ಕ ಇರುವುದಿಲ್ಲ. ಆಸಕ್ತರು ಪ್ರಕಾಶ ಶಿಲ್ಪಿ ಅಧ್ಯಕ್ಷರು ಮೊ: 9880060654, ಮಂಜುನಾಥ ಜಿ. ಗೊಂಡಬಾಳ ಪ್ರಧಾನ ಕಾರ್ಯದರ್ಶಿ ಮೊ: 9448300070, ವಿರೇಶ ಚೋಳಪ್ಪನವರ ಮೊ: 9916122639.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್