
ಕೊಪ್ಪಳ, 03 ಜೂನ್ (ಹಿ.ಸ.) :
ಆ್ಯಂಕರ್ : ಯಲಬುರ್ಗಾದ ಸರ್ಕಾರಿ ಅಲ್ಪಸಂಖ್ಯಾತರ ಮೌಲಾನಾ ಆಜಾದ ಆಂಗ್ಲ ಮಾದ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಾಲೆಯಲ್ಲಿ ಸಮಾಜ ವಿಜ್ಞಾನ (ಆಂಗ್ಲ ಮಾಧ್ಯಮ) ಮತ್ತು ಗಣಿತ (ಆಂಗ್ಲ ಮಾಧ್ಯಮ) ವಿಷಯಗಳಿಗೆ ತಲಾ ಒಂದು ಹುದ್ದೆ ಖಾಲಿಯಿದ್ದು, ಸಮಾಜ ವಿಜ್ಞಾನ ವಿಷಯದ ಹುದ್ದೆಗೆ ಬಿಎ ಬಿ.ಎಡ್ ಹಾಗೂ ಗಣಿತ ವಿಷಯದ ಹುದ್ದೆಗೆ ಬಿಎಸ್ಸಿ ಬಿ.ಎಡ್ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಜೂನ್ 10 ರೊಳಗೆ ಮೌಲಾನಾ ಆಜಾದ ಆಂಗ್ಲ ಮಾದ್ಯಮ ಶಾಲೆ, ಯಲಬುರ್ಗಾ ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿಲ್ಪಾ ಕೆ. ಮೊಬೈಲ್ ಸಂಖ್ಯೆ: 7019420660 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಯಲಬುರ್ಗಾದ ಸರ್ಕಾರಿ ಅಲ್ಪಸಂಖ್ಯಾತರ ಮೌಲಾನಾ ಆಜಾದ ಆಂಗ್ಲ ಮಾದ್ಯಮ ಶಾಲೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್