ಸಂಸ್ಕೃತಿಗಳಿಗೆ ನೀಡುವ ಗೌರವದಿಂದ ವಿಶ್ವಾಸ ಮತ್ತು ಸಹೋದರತ್ವ ಬಲಗೊಳ್ಳುತ್ತದೆ : ಪ್ರಧಾನಿ ನರೇಂದ್ರ ಮೋದಿ
ನಾನಾ
Pm post


ನವದೆಹಲಿ, 29 ಜೂನ್ (ಹಿ.ಸ.) :

ಆ್ಯಂಕರ್ : ಜಗತ್ತಿನ ನಾನಾ ದೇಶಗಳ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳಿಗೆ ಗೌರವ ನೀಡುವುದರಿಂದ ಜನರ ನಡುವೆ ವಿಶ್ವಾಸ, ಸಹಕಾರ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ವೃದ್ಧಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ವೈವಿಧ್ಯತೆಯನ್ನು ಗೌರವಿಸುವುದೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಇದರಿಂದ ಪರಸ್ಪರ ತಿಳಿವಳಿಕೆ ಮತ್ತು ಸಹೋದರತ್ವದ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಈ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.

ದೇಶಾಚಾರಾನ್ ಸಮಯಾಂ ಜಾತಿಧರ್ಮಾನ್ ಬುಭೂಷತೇ ಯಸ್ತು ಪರಾವರಜ್ಞಃ।

ಸ ತತ್ರ ತತ್ರಾಧಿಗತಃ ಸದೈವ ಮಹಾಜನಸ್ಯಾಧಿಪತ್ಯಂ ಕರೋತಿ॥

ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಪ್ರಧಾನಿ, ವಿವಿಧ ದೇಶಗಳ ಸಂಪ್ರದಾಯಗಳು, ಕಾಲಾನುಸಾರ ರೂಪುಗೊಂಡ ಆಚರಣೆಗಳು ಹಾಗೂ ಸಮಾಜದ ಧರ್ಮ-ಸಂಸ್ಕೃತಿಗಳನ್ನು ಅರಿತು ಗೌರವಿಸುವ ವ್ಯಕ್ತಿ ಎಲ್ಲೆಡೆ ಜನರ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ತಿಳಿಸಿದ್ದಾರೆ.

ವೈವಿಧ್ಯಮಯ ಸಂಸ್ಕೃತಿಗಳಿಗೆ ಗೌರವ ನೀಡುವ ಮನೋಭಾವವು ವಿಶ್ವದ ಜನರ ನಡುವೆ ವಿಶ್ವಾಸ, ಸಹಕಾರ, ಪರಸ್ಪರ ಅರ್ಥೈಸಿಕೊಳ್ಳುವಿಕೆ ಹಾಗೂ ಸಹೋದರತ್ವದ ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande