ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಜನ್ಮಜಯಂತಿ ; ಗಣ್ಯರ ನಮನ
ನವದೆಹಲಿ, 28 ಜೂನ್ (ಹಿ.ಸ.) : ಆ್ಯಂಕರ್ : ಮಾಜಿ ಪ್ರಧಾನಿ, ಭಾರತ ರತ್ನ ಪುರಸ್ಕೃತ ಪಿ.ವಿ. ನರಸಿಂಹ ರಾವ್ ಅವರ ಜನ್ಮಜಯಂತಿಯ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ರಾಜಕೀಯ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು. ಲೋಕಸಭಾ
File photo


ನವದೆಹಲಿ, 28 ಜೂನ್ (ಹಿ.ಸ.) :

ಆ್ಯಂಕರ್ : ಮಾಜಿ ಪ್ರಧಾನಿ, ಭಾರತ ರತ್ನ ಪುರಸ್ಕೃತ ಪಿ.ವಿ. ನರಸಿಂಹ ರಾವ್ ಅವರ ಜನ್ಮಜಯಂತಿಯ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ರಾಜಕೀಯ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂದೇಶ ಪ್ರಕಟಿಸಿ, ಮಾಜಿ ಪ್ರಧಾನಿ, ಭಾರತ ರತ್ನ ಪಿ.ವಿ. ನರಸಿಂಹ ರಾವ್ ಅವರಿಗೆ ಜನ್ಮಜಯಂತಿಯಂದು ವಿನಮ್ರ ನಮನಗಳು. ದೇಶದ ಪ್ರಗತಿಗಾಗಿ ದೂರದೃಷ್ಟಿಯ ನೀತಿನಿರ್ಮಾಪಕರಾಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಇತಿಹಾಸದ ಅತ್ಯಂತ ಮಹತ್ವದ ಘಟ್ಟದಲ್ಲಿ ದೇಶದ ಅಭಿವೃದ್ಧಿಗೆ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು. ಅವರು ದಕ್ಷ ಆಡಳಿತಗಾರರಾಗಿದ್ದಷ್ಟೇ ಅಲ್ಲದೆ, ಅಪಾರ ಪಾಂಡಿತ್ಯ ಹೊಂದಿದ್ದ ವಿದ್ವಾಂಸರಾಗಿದ್ದರು. ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಆಳವಾದ ಜ್ಞಾನ ಹಾಗೂ ತಿಳುವಳಿಕೆಯನ್ನು ಹೊಂದಿದ್ದರು ಎಂದು ಪ್ರಧಾನಿ ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೂರದೃಷ್ಟಿಯ ನಾಯಕ ಮತ್ತು ಶ್ರೇಷ್ಠ ರಾಜಕಾರಣಿಯಾಗಿ ಪಿ.ವಿ. ನರಸಿಂಹ ರಾವ್ ಅವರು ಭಾರತದ ಆರ್ಥಿಕ ಪರಿವರ್ತನೆಗೆ ನಿರ್ಣಾಯಕ ಪಾತ್ರ ವಹಿಸಿದರು. ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆ ಮತ್ತು ಕೊಡುಗೆ ಸದಾಕಾಲ ಸ್ಮರಣೀಯ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು, ನರಸಿಂಹ ರಾವ್ ನೇತೃತ್ವದ ಸರ್ಕಾರ ಆರಂಭಿಸಿದ ಐತಿಹಾಸಿಕ ಆರ್ಥಿಕ ಉದಾರೀಕರಣ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿತು ಎಂದು ಹೇಳಿದರು. ಮಧ್ಯಮ ವರ್ಗಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಿದ್ದು, ಭಾರತ ದೀರ್ಘಕಾಲೀನ ಅಭಿವೃದ್ಧಿಯ ಪಥದಲ್ಲಿ ಸಾಗಲು ಅದು ಪ್ರಮುಖ ಕಾರಣವಾಯಿತು ಎಂದು ತಿಳಿಸಿದರು. ಅವರ ಆಡಳಿತಾವಧಿಯಲ್ಲಿ ಭಾರತದ ಪರಮಾಣು ಕಾರ್ಯಕ್ರಮ ಗಮನಾರ್ಹ ಪ್ರಗತಿ ಸಾಧಿಸಿತು. ಜೊತೆಗೆ ಐತಿಹಾಸಿಕ 'ಲುಕ್ ಈಸ್ಟ್' ವಿದೇಶಾಂಗ ನೀತಿಯಂತಹ ದೂರದೃಷ್ಟಿಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಅವರು ಸ್ಮರಿಸಿದರು.

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು, ತೆಲಂಗಾಣದ ಹೆಮ್ಮೆಯ ಪುತ್ರ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಪಿ.ವಿ. ನರಸಿಂಹ ರಾವ್ ಅವರನ್ನು ಅವರ ಜನ್ಮಜಯಂತಿಯಂದು ಗೌರವದಿಂದ ಸ್ಮರಿಸುತ್ತಿದ್ದೇನೆ. ದೂರದೃಷ್ಟಿಯ ನಾಯಕ, ವಿದ್ವಾಂಸ ಮತ್ತು ಸಮರ್ಥ ಆಡಳಿತಗಾರರಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಹೈದರಾಬಾದ್ ವಿಮೋಚನಾ ಹೋರಾಟದಲ್ಲಿಯೂ ಅವರ ಪಾತ್ರ ಗಮನಾರ್ಹವಾಗಿದೆ ಎಂದು ಹೇಳಿದರು.

ದೇಶದ ಆರ್ಥಿಕ ಸುಧಾರಣೆಗಳಿಗೆ ಬುನಾದಿ ಹಾಕಿದ ನಾಯಕರಲ್ಲಿ ಒಬ್ಬರಾಗಿರುವ ಪಿ.ವಿ. ನರಸಿಂಹ ರಾವ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ವಿವಿಧ ರಾಜಕೀಯ ನಾಯಕರು ಕೃತಜ್ಞತೆಯಿಂದ ಸ್ಮರಿಸಿ, ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande