ಕೆಂಪೇಗೌಡರಿಗೆ ಋಣಿಯಾಗಿರೋಣ : ಸಿದ್ದರಾಮಯ್ಯ
ಬೆಂಗಳೂರು, 27 ಜೂನ್ (ಹಿ.ಸ.) : ಆ್ಯಂಕರ್ : ನಾಡಪ್ರಭು ಕೆಂಪೇಗೌಡರ ದಕ್ಷ ಮತ್ತು ದೂರದೃಷ್ಟಿಯ ಆಡಳಿತದ ಫಲವಾಗಿ ನಿರ್ಮಾಣಗೊಂಡ ಬೆಂಗಳೂರು ನಗರವು ಇಂದು ಸಿಲಿಕಾನ್ ವ್ಯಾಲಿಯಾಗಿ, ಉದ್ಯಾನ ನಗರಿಯಾಗಿ, ತಂತ್ರಜ್ಞಾನದ ತವರಾಗಿ, ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಜಾಗತಿಕವಾಗಿ ಹೆಸರುವಾಸಿಯಾ
ಸಿದ್ದರಾಮಯ್ಯ ಪೋಸ್ಟ್


ಬೆಂಗಳೂರು, 27 ಜೂನ್ (ಹಿ.ಸ.) :

ಆ್ಯಂಕರ್ : ನಾಡಪ್ರಭು ಕೆಂಪೇಗೌಡರ ದಕ್ಷ ಮತ್ತು ದೂರದೃಷ್ಟಿಯ ಆಡಳಿತದ ಫಲವಾಗಿ ನಿರ್ಮಾಣಗೊಂಡ ಬೆಂಗಳೂರು ನಗರವು ಇಂದು ಸಿಲಿಕಾನ್ ವ್ಯಾಲಿಯಾಗಿ, ಉದ್ಯಾನ ನಗರಿಯಾಗಿ, ತಂತ್ರಜ್ಞಾನದ ತವರಾಗಿ, ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಂಪೇಗೌಡರ ೫೧೭ನೇ ಜಯಂತಿ ಅಂಗವಾಗಿ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು,

ಕೋಟ್ಯಂತರ ಜನರಿಗೆ ಅನ್ನ, ನೀರು, ಸೂರು ನೀಡಿ ಸಲಹುತ್ತಿರುವ ಈ ನಗರದ ನಿರ್ಮಾತೃಗಳಾದ ಕೆಂಪೇಗೌಡರಿಗೆ ನಾವೆಲ್ಲರೂ ಋಣಿಯಾಗಿರೋಣ ಎಂದು ಕೆಂಪೇಗೌಡರ ಜಯಂತಿ ಶುಭಾಶಯ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande