ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನ ; ಬಿಜೆಪಿ ವತಿಯಿಂದ ಗೌರವ ನಮನ
ನವದೆಹಲಿ, 23 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷವು ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ತಮ್ಮ ಸಂದೇಶದಲ್ಲಿ, “ಪ್ರ
ನಿತಿನ್ ನವೀನ್ ಪುಷ್ಪ ನಮನ


ನವದೆಹಲಿ, 23 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷವು ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ತಮ್ಮ ಸಂದೇಶದಲ್ಲಿ, “ಪ್ರಖರ ರಾಷ್ಟ್ರವಾದಿ ಚಿಂತಕ ಹಾಗೂ ಭಾರತ ಮಾತೆಯ ಅಖಂಡತೆಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಮಹಾನ್ ದೇಶಭಕ್ತ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಅವರಿಗೆ ಕೋಟಿ ಕೋಟಿ ನಮನಗಳು” ಎಂದು ಹೇಳಿದ್ದಾರೆ.

“ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನರು ಮತ್ತು ಎರಡು ಧ್ವಜಗಳು ಇರಬಾರದು” ಎಂಬ ಡಾ. ಮುಖರ್ಜಿ ಅವರ ಸಂಕಲ್ಪವು ಕೇವಲ ಒಂದು ಘೋಷಣೆಯಾಗಿರಲಿಲ್ಲ. ಅದು ರಾಷ್ಟ್ರದ ಏಕತೆ ಮತ್ತು ಅಖಂಡತೆಯ ಕುರಿತಾದ ಅವರ ಅಚಲ ಬದ್ಧತೆಯ ಪ್ರತೀಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಡಾ. ಮುಖರ್ಜಿ ನಡೆಸಿದ ಹೋರಾಟ ಮತ್ತು ಅವರು ನೀಡಿದ ಬಲಿದಾನ ಭಾರತೀಯ ಇತಿಹಾಸದಲ್ಲಿ ಅಳಿಸಲಾಗದ ಅಧ್ಯಾಯವಾಗಿ ಉಳಿದಿದೆ. ದೇಶದ ಏಕತೆಗಾಗಿ ಅವರು ತೋರಿದ ಧೈರ್ಯ ಮತ್ತು ದೃಢನಿಶ್ಚಯ ಇಂದಿಗೂ ದೇಶಭಕ್ತರಿಗೆ ಪ್ರೇರಣೆಯಾಗಿದೆ ಎಂದು ನಿತಿನ್ ನವೀನ್ ಹೇಳಿದ್ದಾರೆ.

ಭಾರತೀಯ ಜನಸಂಘವನ್ನು ಸ್ಥಾಪಿಸುವ ಮೂಲಕ ಡಾ. ಮುಖರ್ಜಿ ರಾಷ್ಟ್ರವಾದಿ ಚಿಂತನೆಗೆ ಬಲಿಷ್ಠ ಅಡಿಪಾಯ ಹಾಕಿದರು. ತಮ್ಮ ವಿಚಾರಧಾರೆ, ಧೈರ್ಯ, ತ್ಯಾಗ ಮತ್ತು ರಾಷ್ಟ್ರಪ್ರೇಮದ ಮೂಲಕ ‘ರಾಷ್ಟ್ರ ಮೊದಲು’ ಎಂಬ ಸಂದೇಶವನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಬಿತ್ತಿದರು ಎಂದು ಅವರು ಸ್ಮರಿಸಿದ್ದಾರೆ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನ ಮತ್ತು ಬಲಿದಾನವು ದೇಶದ ಹಿತಾಸಕ್ತಿಯೇ ಸರ್ವೋನ್ನತ ಎಂಬ ಸಂದೇಶವನ್ನು ಸದಾ ಸಾರುತ್ತಿರುತ್ತದೆ. ಭಾರತದ ಏಕತೆ, ಅಖಂಡತೆ ಮತ್ತು ಸ್ವಾಭಿಮಾನವನ್ನು ಕಾಪಾಡಲು ಶ್ರಮಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿಯಾಗಲಿದೆ ಎಂದು ನಿತಿನ್ ನವೀನ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande