ಮಂಗೋಲಿಯಾದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್
ನವದೆಹಲಿ, 22 ಜೂನ್ (ಹಿ.ಸ.) : ಆ್ಯಂಕರ್ : ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ನಾಲ್ಕು ದಿನಗಳ ವಿದೇಶ ಪ್ರವಾಸದ ಮೊದಲ ಹಂತವಾಗಿ ಸೋಮವಾರ ಮಂಗೋಲಿಯಾಗೆ ಆಗಮಿಸಿದರು. ಮಂಗೋಲಿಯಾದ ವಿದೇಶಾಂಗ ಕಾರ್ಯದರ್ಶಿ ಮುನಕ್ತುಶಿಗ್ ಇಲ್ಖಾನಾಜವ್ ಅವರು ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮಂಗೋಲಿಯಾದಲ್ಲಿ ಜೈಶಂಕರ್


ನವದೆಹಲಿ, 22 ಜೂನ್ (ಹಿ.ಸ.) :

ಆ್ಯಂಕರ್ : ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ನಾಲ್ಕು ದಿನಗಳ ವಿದೇಶ ಪ್ರವಾಸದ ಮೊದಲ ಹಂತವಾಗಿ ಸೋಮವಾರ ಮಂಗೋಲಿಯಾಗೆ ಆಗಮಿಸಿದರು. ಮಂಗೋಲಿಯಾದ ವಿದೇಶಾಂಗ ಕಾರ್ಯದರ್ಶಿ ಮುನಕ್ತುಶಿಗ್ ಇಲ್ಖಾನಾಜವ್ ಅವರು ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, ಮಂಗೋಲಿಯಾಗೆ ಆಗಮಿಸಿರುವುದು ಸಂತಸದ ವಿಷಯ ಎಂದು ತಿಳಿಸಿದ್ದಾರೆ. ಆತ್ಮೀಯ ಸ್ವಾಗತ ಕೋರಿದ ವಿದೇಶಾಂಗ ಕಾರ್ಯದರ್ಶಿ ಮುನಕ್ತುಶಿಗ್ ಇಲ್ಖಾನಾಜವ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಭಾರತ–ಮಂಗೋಲಿಯಾ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಫಲಪ್ರದ ಮಾತುಕತೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಜೈಶಂಕರ್ ಅವರು ಜೂನ್ 22 ಮತ್ತು 23ರಂದು ಮಂಗೋಲಿಯಾ ಪ್ರವಾಸದಲ್ಲಿರಲಿದ್ದಾರೆ. ಈ ಅವಧಿಯಲ್ಲಿ ಅವರು ಮಂಗೋಲಿಯಾದ ಉನ್ನತ ನಾಯಕತ್ವವನ್ನು ಭೇಟಿ ಮಾಡಲಿದ್ದು, ತಮ್ಮ ಮಂಗೋಲಿಯಾ ಸಹವರ್ತಿ ವಿದೇಶಾಂಗ ಸಚಿವೆ ಬಿ. ಬಟ್ಸೆಟ್ಸೆಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದಾದ ಬಳಿಕ ಜೈಶಂಕರ್ ಅವರು ಜೂನ್ 24 ಮತ್ತು 25ರಂದು ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಅವರು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಹ್ಯುನ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಜೂನ್ 25ರಂದು ದಕ್ಷಿಣ ಕೊರಿಯಾದ ಜೆಜುನಲ್ಲಿ ನಡೆಯಲಿರುವ ಜೆಜು ಫೋರಂ ಫಾರ್ ಪೀಸ್ ಅಂಡ್ ಪ್ರಾಸ್ಪೆರಿಟಿ ಕಾರ್ಯಕ್ರಮದಲ್ಲಿ ಜೈಶಂಕರ್ ಮುಖ್ಯ ಭಾಷಣ ಮಾಡಲಿದ್ದಾರೆ. ಈ ವೇದಿಕೆಯಲ್ಲಿ ಪ್ರಾದೇಶಿಕ ಭದ್ರತೆ, ಶಾಂತಿ, ಆರ್ಥಿಕ ಸಹಕಾರ ಹಾಗೂ ಜಾಗತಿಕ ಸವಾಲುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande