ಬಳ್ಳಾರಿ : ಶಿಡಿಗಿನಮೊಳ ಗ್ರಾಮದ ಯುವಕ ಕಾಣೆ
ಬಳ್ಳಾರಿ, 20 ಜೂನ್ (ಹಿ.ಸ.) : ಆ್ಯಂಕರ್ : ತಾಲ್ಲೂಕಿನ ಶಿಡಿಗಿನಮೊಳ ಗ್ರಾಮದ ವೀರಾಂಜನೇಯ(23) ಕಾಣೆಯಾಗಿರುವ ಕುರಿತು ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ. ಚಹರೆ ಗುರುತು : ಅಂದಾಜು 5.4 ಅಡಿ ಎತ್ತರ, ಕೋಲು ಮುಖ, ಎಣ್ಣೆ ಗ
ಬಳ್ಳಾರಿ : ಶಿಡಿಗಿನಮೊಳ ಗ್ರಾಮದ ಯುವಕ ಕಾಣೆ


ಬಳ್ಳಾರಿ, 20 ಜೂನ್ (ಹಿ.ಸ.) :

ಆ್ಯಂಕರ್ : ತಾಲ್ಲೂಕಿನ ಶಿಡಿಗಿನಮೊಳ ಗ್ರಾಮದ ವೀರಾಂಜನೇಯ(23) ಕಾಣೆಯಾಗಿರುವ ಕುರಿತು ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಚಹರೆ ಗುರುತು :

ಅಂದಾಜು 5.4 ಅಡಿ ಎತ್ತರ, ಕೋಲು ಮುಖ, ಎಣ್ಣೆ ಗೆಂಪು ಮೈಬಣ್ಣ, ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆಗಳನ್ನು ಮಾತನಾಡುತ್ತಾನೆ.

ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯ ದೂ.08392- 265010, ಸಿಪಿಐ ದೂ.08392-276461, ಬಳ್ಳಾರಿ ಎಸ್.ಪಿ. ಕಚೇರಿ ದೂ.08392258400 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392258100 ಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande