
ಹಾವೇರಿ, 20 ಜೂನ್ (ಹಿ.ಸ.) :
ಆ್ಯಂಕರ್ : ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆಗಿರುವುದು ಅತ್ಯಂತ ಆಘಾತಕಾರಿ ಹಾಗೂ ದುರ್ದೈವದ ಸಂಗತಿ. ಕಾಂಗ್ರೆಸ್ ಪೊಲಿಟಿಕಲ್ ಕರಪ್ಷನ್ ನಡೆಸಿದ್ದು, ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರುವುದು ನಿಜ. ಈ ಕುರಿತು ಪಕ್ಷದ ನೇಮಿಸಿರುವ ಸಮಿತಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಬಾರದಿತ್ತು. ಇದು ನಮಗೆ ಅತ್ಯಂತ ಆಘಾತಕಾರಿ ಹಾಗೂ ದುರ್ದೈವದ ಸಂಗತಿ. ಅಡ್ಡ ಮತದಾನದ ಕುರಿತು ತನಿಖೆ ನಡೆಸಿ ಅದರ ವರದಿಯನ್ನು ಹೈಕಮಾಂಡ್ ಗೆ ಕಳಿಸುವುದಾಗಿ ವಿಪಕ್ಷ ನಾಯಕರು, ಹಾಗೂ ರಾಜ್ಯಾದ್ಯಕ್ಷರು ಈಗಾಗಲೇ ಹೇಳಿದ್ದಾರೆ. ಅದರ ವರದಿ ಒಂದು ವಾರದಲ್ಲಿ ತರಿಸಿಕೊಂಡು ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಣದ ದುರಹಂಕಾರದಿಂದ ಆಡಳಿತ ನಡೆಸುತ್ತಿದೆ. ಇದು ಪೊಲಿಟಿಕಲ್ ಕರಪ್ಷನ್ ಬಹಳ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದ್ದಾರೆ. ಹಣದ ಆಮಿಷಕ್ಕೆ ನಮ್ಮ ಕೆಲವು ಶಾಸಕರು ಬಲಿಯಾಗಿರೋದು ನಿಜ. ಹೀಗೆ ಆಗಬಾರದಾಗಿತ್ತು ಈಗ ಇಂಥ ತಪ್ಪುಗಳಾಗದಂತೆ ಇನ್ನು ಮುಂದೆ ಎಚ್ಚರಿಕೆ ವಹಿಸುತ್ತೇವೆ. ಯಾರ ತಲೆದಂಡ ಆಗಬೇಕು ಎಂಬ ಬಗ್ಗೆ ಒಂದು ಸಮಿತಿ ಮಾಡಿದ್ದೇವೆ. ಸಮಿತಿ ವರದಿ ಆಧರಿಸಿ ಕ್ರಮ ಆಗುತ್ತದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.