ನೈಸರ್ಗಿಕ ಕೃಷಿಗೆ ಉತ್ತೇಜನ
ಕೊಪ್ಪಳ, 02 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನೈಸರ್ಗಿಕ ಕೃಷಿ ಹಾಗೂ “ಧರ್ತಿ ಮಾತಾ ಭಚಾವೋ, ಖೇತ್ ಬಚಾವೋ'''' ಆಂದೋಲನ ಹಾಗೂ ಡಿಎಪಿ ಬದಲಿಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡುವಂತೆ ಅರಿವು ಮೂಡಿಸುವ ಮೂಲಕ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ
ನೈಸರ್ಗಿಕ ಕೃಷಿಗೆ ಉತ್ತೇಜನ


ಕೊಪ್ಪಳ, 02 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನೈಸರ್ಗಿಕ ಕೃಷಿ ಹಾಗೂ “ಧರ್ತಿ ಮಾತಾ ಭಚಾವೋ, ಖೇತ್ ಬಚಾವೋ'' ಆಂದೋಲನ ಹಾಗೂ ಡಿಎಪಿ ಬದಲಿಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡುವಂತೆ ಅರಿವು ಮೂಡಿಸುವ ಮೂಲಕ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸದೇ ಮಾಡುವ ಕೃಷಿ ವಿಧಾನ. ಇದು ಮುಖ್ಯವಾಗಿ ಸ್ಥಳೀಯ ತಳಿಯ ಹಸುಗಳ ಆಧಾರಿತ ಪಶುಸಂಗೋಪನೆ, ನಮ್ಮ ಸಾಂಪ್ರದಾಯಿಕ ಕೃಷಿ ಜ್ಞಾನ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಒಳಗೊಂಡಿರುತ್ತದೆ. ಈ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಒಟ್ಟಾಗಿ ಬೆಳೆಯುವುದಕ್ಕೆ ಆದ್ಯತೆ ನೀಡಲಾಗುತ್ತದೆ. ನೈಸರ್ಗಿಕ ಕೃಷಿಯಿಂದ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಉತ್ತಮಗೊಳ್ಳುತ್ತದೆ, ನೀರು ಮತ್ತು ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಹಾಗೂ ಕೃಷಿ ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಇದಲ್ಲದೆ, ರೈತರ ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ ಕೃಷಿ ಹೆಚ್ಚು ಲಾಭದಾಯಕವಾಗುತ್ತದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಎದುರಿಸುವ ಸಾಮಥ್ರ್ಯವೂ ಹೆಚ್ಚುತ್ತದೆ. ನೈಸರ್ಗಿಕ ಕೃಷಿ ಮಣ್ಣು, ನೀರು, ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮ ಜೀವಿಗಳು, ಹವಾಮಾನ ಮತ್ತು ಮಾನವರ ಅಗತ್ಯಗಳ ನಡುವೆ ಇರುವ ಪರಸ್ಪರ ಅವಲಂಬಿತ ಸಂಬಂಧವನ್ನು ಗೌರವಿಸುವ ಹಾಗೂ ಉಳಿಸುವ ಸಮಗ್ರ ಕೃಷಿ ಪದ್ಧತಿಯಾಗಿದೆ.

ಪ್ರಸ್ತುತ ಕಾಲದಲ್ಲಿ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಅತಿಯಾಗಿ ಹಾಗೂ ಅಸಮತೋಲನವಾಗಿ ಬಳಸುವುದರಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತಿದ್ದು, ಪೆÇೀಷಕಾಂಶಗಳ ಸಮತೋಲನ ಹಾಳಾಗುತ್ತಿದೆ. ಜೊತೆಗೆ ನೀರಿನ ಮೂಲಗಳು ಕೂಡ ಮಾಲಿನ್ಯಗೊಳ್ಳುತ್ತಿವೆ. ನಿರಂತರವಾಗಿ ರಾಸಾಯನಿಕ ಗೊಬ್ಬರಗಳ ಮೇಲೆಯೇ ಅವಲಂಬಿತರಾಗುವುದರಿಂದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳು ಮತ್ತು ಜೀವ ವೈವಿಧ್ಯತೆ ಕುಗ್ಗುತ್ತಿವೆ. ಇದರ ಪರಿಣಾಮವಾಗಿ ಮಣ್ಣಿನ ಸಹಜ ಫಲವತ್ತತೆ ಮತ್ತು ದೀರ್ಘಕಾಲದ ಉತ್ಪಾದನಾ ಸಾಮಥ್ರ್ಯ ಕಡಿಮೆಯಾಗುತ್ತಿದೆ.

ಇದಲ್ಲದೆ, ರಾಸಾಯನಿಕ ಗೊಬ್ಬರಗಳ ಹೆಚ್ಚಿದ ಬಳಕೆಯಿಂದ ರೈತರ ಕೃಷಿ ವೆಚ್ಚವೂ ಹೆಚ್ಚುತ್ತಿದ್ದು, ಪರಿಸರಕ್ಕೂ ಹಾನಿಯಾಗುತ್ತಿದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ನವೆಂಬರ್ 2024ರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಮೂಲಕ ದೇಶದಾದ್ಯಂತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದೆ. ನೈಸರ್ಗಿಕ ಕೃಷಿಯು ಹೊರಗಿನಿಂದ ಖರೀದಿಸಬೇಕಾದ ಗೊಬ್ಬರ ಮತ್ತು ಇತರ ಕೃಷಿ ಸಾಮಾಗ್ರಿಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಮಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಹವಾಮಾನ ಬದಲಾವಣೆಗಳಿಂದ ಉಂಟಾಗುವ ಸವಾಲುಗಳನ್ನು ಎದುರಿಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ.

ಆದ್ದರಿಂದ, ನೈಸರ್ಗಿಕ ಕೃಷಿ ಶಾಶ್ವತ, ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಲಾಭದಾಯಕ ಕೃಷಿ ಪದ್ಧತಿಯಾಗಿ ಹೊರಹೊಮ್ಮಿದೆ. ಇದರ ಅಳವಡಿಕೆಯಿಂದ ಪರಿಸರ ಸಮತೋಲನವನ್ನು ಪುನಃ ಸ್ಥಾಪಿಸಲು, ಕೃಷಿ ಉತ್ಪಾದನೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಹಾಗೂ ರೈತರ ಜೀವನಮಟ್ಟವನ್ನು ಸುಧಾರಿಸಲು ಮಹತ್ವದ ಸಹಕಾರ ದೊರೆಯುತ್ತದೆ.

ಈ ಹಿನ್ನಲೆಯಲ್ಲಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ದೇಶಾದ್ಯಂತ ಜೂನ್ 1 ರಿಂದ ಜೂ. 15 ರವರೆಗೆ “ಖೇತ್ ಬಚಾವೋ ಅಭಿಯಾನ” (ಏheಣ ಃಚಿಛಿhಚಿo ಂbhiಥಿಚಿಟಿ) ಹಮ್ಮಿಕೊಳ್ಳುವಂತೆ ಮನವಿ ಮಾಡಿರುತ್ತಾರೆ. ಇದರ ಉದ್ದೇಶ ಗೊಬ್ಬರಗಳ ಸಮತೋಲನ ಮತ್ತು ವಿವೇಕಪೂರ್ಣ ಬಳಕೆ, ನೈಸರ್ಗಿಕ ಕೃಷಿ ಇತ್ಯಾದಿಗಳ ಬಗ್ಗೆ ರೈತರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು. “ಖೇತ್ ಬಚಾವೋ ಅಭಿಯಾನ”ದ ಅಂಗವಾಗಿ ಪ್ರತಿ ತಾಲ್ಲೂಕು, ಹೋಬಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನೈಸರ್ಗಿಕ ಕೃಷಿಯ ಪ್ರಯೋಜನಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರೈತರ ಸಂವಾದಗಳು, ಕ್ಷೇತ್ರ ಪ್ರದರ್ಶನಗಳು ಹಾಗೂ ಸ್ಥಳೀಯ ಅಭಿಯಾನಗಳನ್ನು ಆತ್ಮ, ಕೃಷಿ ಸಂಜೀವಿನಿ ಸಿಬ್ಬಂದಿ ಇವರ ಮೂಲಕ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು. ಗೊಬ್ಬರಗಳ ಸಮತೋಲನ ಬಳಕೆಯನ್ನು ಉತ್ತೇಜಿಸುವುದಾಗಿದೆ. “ಖೇತ್ ಬಚಾವೋ ಅಭಿಯಾನ”ದ ಭಾಗವಾಗಿ, ಯೂರಿಯಾ/ಡಿಎಪಿ ಬಳಕೆ ಹೆಚ್ಚು ಇರುವ ಪ್ರದೇಶಗಳಲ್ಲಿ ಗೊಬ್ಬರಗಳ ಅತಿಯಾದ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡು, ಗೊಬ್ಬರದ ಅನಧಿಕೃತ ವರ್ಗಾವಣೆ, ಅಕ್ರಮ ಸಂಗ್ರಹಣೆ ಹಾಗೂ ದುರುಪಯೋಗ ತಡೆಯಲು ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳುವುದು. ಪಂಚಾಯತ್ ಮಟ್ಟದಲ್ಲಿ ರಚಿಸಲಾದ “ಧರ್ತಿ ಮಾತಾ ಭಚಾವೋ-ಖೇತ್ ಬಚಾವೋ ಸಮಿತಿಗಳ” ನಿಯಮಿತ ಸಭೆಗಳನ್ನು ನಡೆಸಿ, ರೈತರಿಗೆ ಗೊಬ್ಬರಗಳ ಸಮತೋಲನ ಮತ್ತು ವಿವೇಕಪೂರ್ಣ ಬಳಕೆಯ ಕುರಿತು ಜಾಗೃತಿ ಮೂಡಿಸುವುದಾಗಿದೆ.

ಡಿಎಪಿ, ಯೂರಿಯಾ ಪರ್ಯಾಯವಾಗಿ ಎನ್.ಪಿ.ಕೆ ಸಂಯುಕ್ತ ಗೊಬ್ಬರ 10:26:26, 12:36:16, 20:20:0:13, 19:19:19, 17:17:17 ಹಾಗೂ ಎಸ್.ಎಸ್.ಪಿ ಗೊಬ್ಬರಗಳ ಬಳಕೆ, ಜೊತೆಗೆ ಜೈವಿಕ ಗೊಬ್ಬರಗಳು, ನ್ಯಾನೋ ಗೊಬ್ಬರಗಳು, ಸಾವಯವ ಗೊಬ್ಬರಗಳು ಹಾಗೂ ಸೂಕ್ಷ್ಮ ಪೆÇೀಷಕಾಂಶಗಳ ಬಳಕೆಯ ಕುರಿತು ಸಮತೋಲನ ಪೆÇೀಷಕಾಂಶ ನಿರ್ವಹಣೆಯ ಬಗ್ಗೆ ವ್ಯಾಪಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು. ಹಸಿರೆಲೆ ಗೊಬ್ಬರ (ಉಡಿeeಟಿ ಒಚಿಟಿuಡಿiಟಿg) ಬಳಕೆಯನ್ನು ಉತ್ತೇಜಿಸುವಂತೆ ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande