
ಕೊಪ್ಪಳ, 02 ಜೂನ್ (ಹಿ.ಸ.) :
ಆ್ಯಂಕರ್ : ಮದ್ಯ ಪ್ರಾಚ್ಯ ಯುದ್ದ ಬಿಕ್ಕಟ್ಟಿನಿಂದ ಪೆಟ್ರೋಲ್ ಮತ್ತು ಡಿಸೇಲ್ಗೆ ಸಂಬಂದಿಸಿದಂತೆ, ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳ ಉಪಸ್ಥಿತಿಯಲ್ಲಿ ತೈಲ ಕಂಪನಿ ಅಧಿಕಾರಿಗಳಿಗೆ ಮತ್ತು ಪೇಟ್ರೋಲ್ ಬಂಕ್ ಮಾಲೀಕರ ಸಭೆ ನಡೆಯಿತು.
ಪೆಟ್ರೋಲ್ ಹಾಗೂ ಡಿಸೇಲ್ ಪೂರೈಕೆ ಮತ್ತು ವಿತರಣೆ ಕುರಿತು ಜಿಲ್ಲೆಯಲ್ಲಿರುವ ತೈಲ ಕಂಪನಿ ಅಧಿಕಾರಿಗಳು, ಪೇಟ್ರೋಲ್ ಬಂಕ್ ಮಾಲೀಕರು 2002ರ ಪೆಟ್ರೋಲಿಯಂ ಕಾಯ್ದೆಯನ್ವಯ ಹಾಗೂ ಮೇ 8ರ ಪತ್ರದಲ್ಲಿ ಆಯುಕ್ತರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಇವರು ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ತಿಳಿಸುತ್ತಾ, ತೈಲ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಕ್ರಮವಹಿಸಲು ಸೂಚಿಸಿದರು ಎಂದು ಕೊಪ್ಪಳ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್