
ಕೊಪ್ಪಳ, 02 ಜೂನ್ (ಹಿ.ಸ.) :
ಆ್ಯಂಕರ್ : ಕುಷ್ಟಗಿ ಪುರಸಭೆ ವತಿಯಿಂದ ಪಿಎಂ ಸ್ವನಿಧಿ ಯೋಜನೆಯ ಲೋಕ ಕಲ್ಯಾಣ ಮೇಳದಡಿ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿಯಲ್ಲಿ ನಗರದ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಗಳ ಯೋಜನೆಗಳನ್ನು ಕಲ್ಪಿಸುವುದಕ್ಕಾಗಿ ನಗರ ಮಟ್ಟದಲ್ಲಿ ಬ್ಯಾಂಕ್ಗಳ ಸಂಯೋಗದೊಂದಿಗೆ ಲೋಕ ಕಲ್ಯಾಣ ಮೇಳಗಳನ್ನು ಜೂನ್ 1 ರಿಂದ ಜೂ. 30ರ ವರೆಗೆ ಒಂದು ತಿಂಗಳ ಕಾಲ ಆಯೋಜಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ ನವದೆಹಲಿ ಮತ್ತು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಬೆಂಗಳೂರು ರವರು ಸೂಚಿಸಿರುತ್ತಾರೆ.
ಅದರಂತೆ ಜೂ. 1 ರಿಂದ 30ರ ವರೆಗೆ ಕುಷ್ಟಗಿ ನಗರದ ಬೀದಿಬದಿ ವ್ಯಾಪಾರಿಗಳು ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಪಿ.ಎಮ್ ಸ್ವನಿಧಿ ಯೋಜನೆಯಡಿ ರೂ. 15,000 ಗಳು, ರೂ. 25,000 ಗಳು ಮತ್ತು ರೂ. 50,000 ಗಳ ಕಿರು ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಲು ನಗರ ಸ್ಥಳೀಯ ಸಂಸ್ಥೆಯ ಡೇ ನಲ್ಮ್ ವಿಭಾಗವನ್ನು ಸಂಪಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕುಷ್ಟಗಿ ಪುರಸಭೆ ಡೇ-ನಲ್ಮ್ ವಿಭಾಗದ ಸಿಬ್ಬಂದಿಗಳನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸುವಂತೆ ಕುಷ್ಟಗಿ ಪುರಸಭೆಯ ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್