ಮಣ್ಣಿನ ಆರೋಗ್ಯ ರಕ್ಷಣೆಗೆ ನ್ಯಾನೋ ರಸಗೊಬ್ಬರಗಳ ಬಳಕೆ ಅತ್ಯವಶ್ಯಕ : ಜಿ.ಡಿ ಕೃಷ್ಣಮೂರ್ತಿ
ಕೊಪ್ಪಳ, 19 ಜೂನ್ (ಹಿ.ಸ.) : ಆ್ಯಂಕರ್ : ಮಣ್ಣಿನ ಆರೋಗ್ಯ ರಕ್ಷಣೆ, ಭೂ ಮಾತೆಯ ಸಂರಕ್ಷಣೆ ಹಾಗೂ ರಾಸಾಯನಿಕ ರಸಗೊಬ್ಬರ ಕೊರತೆ ನಿವಾರಣೆಗೆ ನ್ಯಾನೋ ರಸಗೊಬ್ಬರಗಳ ಬಳಕೆ ಅತ್ಯವಶ್ಯಕವಾಗಿದ್ದು, ಯುರಿಯಾ ಡಿಎಪಿ ಜೊತೆಗೆ ನ್ಯಾನೋ ರಸಗೊಬ್ಬರಗಳ ಬಳಕೆ, ಯುರಿಯಾ ಮತ್ತು ಡಿಎಪಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವ
ಮಣ್ಣಿನ ಆರೋಗ್ಯ ರಕ್ಷಣೆಗೆ ನ್ಯಾನೋ ರಸಗೊಬ್ಬರಗಳ ಬಳಕೆ ಅತ್ಯವಶ್ಯಕ : ಜಿ.ಡಿ ಕೃಷ್ಣಮೂರ್ತಿ


ಕೊಪ್ಪಳ, 19 ಜೂನ್ (ಹಿ.ಸ.) :

ಆ್ಯಂಕರ್ : ಮಣ್ಣಿನ ಆರೋಗ್ಯ ರಕ್ಷಣೆ, ಭೂ ಮಾತೆಯ ಸಂರಕ್ಷಣೆ ಹಾಗೂ ರಾಸಾಯನಿಕ ರಸಗೊಬ್ಬರ ಕೊರತೆ ನಿವಾರಣೆಗೆ ನ್ಯಾನೋ ರಸಗೊಬ್ಬರಗಳ ಬಳಕೆ ಅತ್ಯವಶ್ಯಕವಾಗಿದ್ದು, ಯುರಿಯಾ ಡಿಎಪಿ ಜೊತೆಗೆ ನ್ಯಾನೋ ರಸಗೊಬ್ಬರಗಳ ಬಳಕೆ, ಯುರಿಯಾ ಮತ್ತು ಡಿಎಪಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರ ಪರಿಶ್ರಮವೇ ದೇಶದ ಆಹಾರ ಭದ್ರತೆಯ ಆಧಾರವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಸಾಯನಿಕ ರಸಗೊಬ್ಬರಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಪ್ರಾರಂಭದಲ್ಲಿ ಇದು ಉತ್ಪಾದನೆ ಹೆಚ್ಚಿಸಲು ಸಹಾಯಕವಾಗಿದ್ದರೂ, ದೀರ್ಘಕಾಲದಲ್ಲಿ ಅತಿಯಾದ ಹಾಗೂ ಅಸಮತೋಲನ ರಾಸಾಯನಿಕ ರಸಗೊಬ್ಬರ ಬಳಕೆ ಭೂಮಾತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ವಿವಿಧ ವೈಜ್ಞಾನಿಕ ಅಧ್ಯಯನಗಳಿಂದ ಸ್ಪಷ್ಟವಾಗಿದೆ.

ಮಣ್ಣಿನ ಆರೋಗ್ಯವು ಸುಸ್ಥಿರ ಕೃಷಿಯ ಮೂಲಾಧಾರವಾಗಿದೆ. ಆದರೆ, ರಾಸಾಯನಿಕ ರಸಗೊಬ್ಬರಗಳ ನಿರಂತರ ಮತ್ತು ಅತಿಯಾದ ಬಳಕೆಯಿಂದ ಮಣ್ಣಿನ ಸ್ವಾಭಾವಿಕ ಗುಣಲಕ್ಷಣಗಳು ಹದಗೆಡುತ್ತಿವೆ. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗುವುದು, ಸಾವಯವ ಕಾರ್ಬನ್ ಅಂಶ ಕುಸಿತ, ಮಣ್ಣಿನ ನೀರು ಹಿಡಿದಿಡುವ ಸಾಮಥ್ರ್ಯ ಕಡಿಮೆಯಾಗುವುದು, ಪೆÇೀಷಕಾಂಶ ಅಸಮತೋಲನ ಉಂಟಾಗುವುದು ಹಾಗೂ ಮಣ್ಣಿನ ಫಲವತ್ತತೆ ಕುಗ್ಗುವಂತಹ ಅನೇಕ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದ ಉತ್ಪಾದನಾ ವೆಚ್ಚ ಏರಿಕೆಯಾಗುವುದರ ಜೊತೆಗೆ ದೀರ್ಘಾವಧಿಯಲ್ಲಿ ಬೆಳೆ ಉತ್ಪಾದಕತೆ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಅದೇ ರೀತಿ, ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸಾಂಪ್ರದಾಯಿಕ ಯೂರಿಯಾ ಹಾಗೂ ಡಿಎಪಿ ಗೊಬ್ಬರಗಳ ಬಹುಪಾಲು ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದೆ ವಾತಾವರಣ, ಮಣ್ಣು ಮತ್ತು ನೀರಿನಲ್ಲಿ ನಷ್ಟವಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ, ಭೂಗತ ಜಲದ ಗುಣಮಟ್ಟ ಕುಸಿತ ಹಾಗೂ ಹಸಿರು ಮನೆ ಅನಿಲಗಳ ಉತ್ಸರ್ಗಕ್ಕೂ ಕಾರಣವಾಗುತ್ತದೆ. ಆದ್ದರಿಂದ “ಕಡಿಮೆ ಗೊಬ್ಬರ–ಹೆಚ್ಚು ಪರಿಣಾಮ” ಎಂಬ ತತ್ವದ ಆಧಾರದಲ್ಲಿ ಸಮತೋಲನ ಪೆÇೀಷಕಾಂಶ ನಿರ್ವಹಣೆ ಇಂದಿನ ಅಗತ್ಯವಾಗಿದೆ.

ಪ್ರಸ್ತುತ ಜಾಗತಿಕ ಮಟ್ಟದ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಸನ್ನಿವೇಶದಲ್ಲಿ ಆಮದು ಅವಲಂಬನೆ, ಕಚ್ಚಾ ವಸ್ತುಗಳ ಲಭ್ಯತೆ ಸಮಸ್ಯೆ ಹಾಗೂ ಸರಬರಾಜು ವ್ಯವಸ್ಥೆಯ ಸವಾಲುಗಳಿಂದ ಕೆಲವು ರಾಸಾಯನಿಕ ರಸಗೊಬ್ಬರಗಳ ಲಭ್ಯತೆಯಲ್ಲಿ ತಾತ್ಕಾಲಿಕ ಕೊರತೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಪರ್ಯಾಯ, ವೈಜ್ಞಾನಿಕ ಹಾಗೂ ಪರಿಣಾಮಕಾರಿ ಗೊಬ್ಬರ ತಂತ್ರಜ್ಞಾನಗಳತ್ತ ಮುಖ ಮಾಡುವುದು ಅತ್ಯಂತ ಅವಶ್ಯಕವಾಗಿದೆ.

ಈ ಹಿನ್ನಲೆಯಲ್ಲಿ (IFFCO), , ಪಿಪಿಎಲ್ ಕಂಪನಿಯವರು ಅಭಿವೃದ್ಧಿ ಪಡಿಸಿರುವ ನ್ಯಾನೋ ಯೂರಿಯಾ (ದ್ರವ) ಮತ್ತು ನ್ಯಾನೋ ಡಿಎಪಿ (ದ್ರವ) ರಸಗೊಬ್ಬರಗಳು ಭವಿಷ್ಯದ ಸುಸ್ಥಿರ ಕೃಷಿಗೆ ಮಹತ್ವದ ಪರಿಹಾರವಾಗಿ ಹೊರ ಹೊಮ್ಮಿವೆ. ನ್ಯಾನೋ ತಂತ್ರಜ್ಞಾನ ಆಧಾರಿತ ಈ ಗೊಬ್ಬರಗಳು ಅತಿಸೂಕ್ಷ್ಮ ಕಣಗಳ ರೂಪದಲ್ಲಿದ್ದು, ಸಸ್ಯಗಳು ಅವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಸಾಮಥ್ರ್ಯ ಹೊಂದಿವೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಹೆಚ್ಚಿನ ಫಲಿತಾಂಶ ದೊರೆಯುತ್ತದೆ.

ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯಿಂದ ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ಈ ಗೊಬ್ಬರಗಳು ಬೆಳೆಗಳಿಗೆ ಅಗತ್ಯವಾದ ಪೆÇೀಷಕಾಂಶಗಳನ್ನು ಸರಿಯಾದ ಸಮಯದಲ್ಲಿ ಪರಿಣಾಮಕಾರಿಯಾಗಿ ಒದಗಿಸುವುದರ ಮೂಲಕ ಬೆಳೆ ಬೆಳವಣಿಗೆ, ಹಸಿರುತನ, ಬೇರುಗಳ ಬೆಳವಣಿಗೆ, ಹೂವು ಹಾಗೂ ಕಾಳು ಅಥವಾ ಹಣ್ಣು ಕಟ್ಟುವಿಕೆಗೆ ಸಹಕಾರಿಯಾಗುತ್ತವೆ.

ನ್ಯಾನೋ ರಸಗೊಬ್ಬರಗಳ ಪ್ರಮುಖ ಲಾಭಗಳು: ನ್ಯಾನೋ ರಸಗೊಬ್ಬರಗಳ ಬಳಕೆಯು ರಾಸಾಯನಿಕ ಗೊಬ್ಬರಗಳ ಅವಲಂಬನೆ ಕಡಿಮೆ ಮಾಡುತ್ತದೆ. ಇದು ಮಣ್ಣಿನ ಆರೋಗ್ಯ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡುತ್ತದೆ. ಪೆÇೀಷಕಾಂಶ ಬಳಕೆ ದಕ್ಷತೆಯನ್ನು ಸಹ ಹೆಚ್ಚಿಸುತ್ತದೆ. ಬೆಳೆಗಳ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಸುಧಾರಿಸುತ್ತದೆ. ಉತ್ಪಾದನಾ ವೆಚ್ಚವನ್ನು ತಗ್ಗಿಸಲು ನೆರವಾಗುತ್ತದೆ. ಪರಿಸರ ಮಾಲಿನ್ಯವನ್ನು ಕಡಿಮೆಮಾಡುತ್ತದೆ. ಭೂಗತ ನೀರು ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿ. ಸುಸ್ಥಿರ ಹಾಗೂ ಪ್ರಕೃತಿ ಸ್ನೇಹಿ ಕೃಷಿಗೆ ಉತ್ತೇಜನ ನೀಡುತ್ತದೆ.

ರೈತ ಬಂಧುಗಳು ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಹಾಗೂ ಇಫೆÇ್ಕೀ ತಾಂತ್ರಿಕ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಬೀಜೋಪಚಾರಕ್ಕೆ ನ್ಯಾನೋ ಡಿಎಪಿ, ಹಾಗೂ ಬೆಳೆ ಹಂತಗಳಿಗೆ ಅನುಗುಣವಾಗಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಸಿಂಪರಣೆಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ರೈತರಲ್ಲಿ ನ್ಯಾನೋ ರಸಗೊಬ್ಬರಗಳ ಕುರಿತು ಜಾಗೃತಿ ಮೂಡಿಸಲು ಕೃಷಿ ಇಲಾಖೆ, ಇಫೆÇ್ಕೀ, ರೈತ ಸಂಪರ್ಕ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), ಕೃಷಿವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರೆ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ನಿರಂತರ ತರಬೇತಿ ಕಾರ್ಯಕ್ರಮಗಳು, ಕ್ಷೇತ್ರ ಪ್ರದರ್ಶನಗಳು, ಮಾದರಿ ಗ್ರಾಮ ಯೋಜನೆಗಳು, ರೈತರ ಸಭೆಗಳು, ಬೆಳೆ ಪ್ರಾತ್ಯಕ್ಷಿಕೆಗಳು ಹಾಗೂ ಧರ್ತಿಮಾತಾ ಬಚಾವೋ, ಖೇತಿ ಬಚಾವೋ ಆಂದೋಲನಾಗಳನ್ನು ಪಂಚಾಯತಿ ಮಟ್ಟದಲ್ಲಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

“ಮಣ್ಣಿನ ಆರೋಗ್ಯ ಉಳಿಸಿ–ಭೂಮಾತೆಯನ್ನು ಕಾಪಾಡಿ–ನ್ಯಾನೋ ರಸಗೊಬ್ಬರ ಅಳವಡಿಸಿ” ಎಂಬ ಧ್ಯೇಯದೊಂದಿಗೆ ರೈತರು ಸುಸ್ಥಿರ ಕೃಷಿಯತ್ತ ಹೆಜ್ಜೆ ಇಡಬೇಕೆಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐ.ಸಿ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande