ಕೊಪ್ಪಳ : ಜೂ. 23ರಂದು ಉಚಿತ ‘ವೆಂಡರ್ ಡೆವಲಪಮೆಂಟ್’ ಕಾರ್ಯಾಗಾರ
ಕೊಪ್ಪಳ, 19 ಜೂನ್ (ಹಿ.ಸ.) : ಆ್ಯಂಕರ್ : ನ್ಯಾಷನಲ್ ಎಸ್ಸಿ, ಎಸ್ಟಿ ಹಬ್, ಅವೇಕ್ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯದ ಉದ್ಯಮಿಗಳು, ಯುವಕರು ಮತ್ತು ಮಹಿಳೆಯರ ಉದ್ಯಮಶೀಲತೆಯನ್ನು
ಕೊಪ್ಪಳ : ಜೂ. 23ರಂದು ಉಚಿತ ‘ವೆಂಡರ್ ಡೆವಲಪಮೆಂಟ್’ ಕಾರ್ಯಾಗಾರ


ಕೊಪ್ಪಳ, 19 ಜೂನ್ (ಹಿ.ಸ.) :

ಆ್ಯಂಕರ್ : ನ್ಯಾಷನಲ್ ಎಸ್ಸಿ, ಎಸ್ಟಿ ಹಬ್, ಅವೇಕ್ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯದ ಉದ್ಯಮಿಗಳು, ಯುವಕರು ಮತ್ತು ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜೂನ್ 23ರಂದು ಕೊಪ್ಪಳದಲ್ಲಿ ಉಚಿತ ವೆಂಡರ್ ಡೆವಲಪಮೆಂಟ್ ಕಾರ್ಯಾಗಾರ ಆಯೋಜಿಸಲಾಗಿದೆ.

ಉಚಿತ ವೆಂಡರ್ ಡೆವಲಪಮೆಂಟ್ ಕಾರ್ಯಾಗಾರವು ಜೂ. 23ರ ಬೆಳಿಗ್ಗೆ 10 ಗಂಟೆಯಿಂದ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆ, ಜಂಟಿ ನಿರ್ದೇಶಕರ ಕಚೇರಿ ಆವರಣ, ಜಿಲ್ಲಾ ಕೈಗಾರಿಕಾ ಕೇಂದ್ರ (ಮಯೂರ ಹೋಟೆಲ್ ಎದುರು, ಅಶೋಕ ಸರ್ಕಲ್ ಹತ್ತಿರ, ಹೊಸಪೇಟೆ ರಸ್ತೆ, ಕೊಪ್ಪಳ)ದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಾಗಾರದಲ್ಲಿ ಹೊಸದಾಗಿ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರು ಹಾಗೂ ಈಗಾಗಲೇ ಉದ್ಯಮ ನಡೆಸುತ್ತಿರುವ ಎಸ್ಸಿ/ಎಸ್ಟಿ ಸಮುದಾಯದವರಿಗೆ ವಿವಿಧ ಕ್ಷೇತ್ರಗಳ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.

ಹೊಸ ಉದ್ಯಮ ಆರಂಭಿಸುವ ವಿಧಾನಗಳು, ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳು, ವೆಂಡರ್ ಡೆವಲಪಮೆಂಟ್ ಅವಕಾಶಗಳು, ಸರ್ಕಾರಿ ಖರೀದಿ ಹಾಗೂ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆ, ಹಣಕಾಸು ನೆರವು ಮತ್ತು ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಮಾರುಕಟ್ಟೆ ಸಂಪರ್ಕಗಳ ಕುರಿತು ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ನೀಡಲಾಗುತ್ತದೆ.

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಜಿಲ್ಲೆಯ ಆಸಕ್ತ ಉದ್ಯಮಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಅವೇಕ್ ಸಂಸ್ಥೆಯ ಮುಖ್ಯ ತರಬೇತಿ ಸಂಯೋಜನಾಧಿಕಾರಿ ಸದಾಶಿವ ಎಸ್. ಅವರ ಮೊಬೈಲ್ ಸಂಖ್ಯೆ 98800 41360 ಅನ್ನು ಸಂಪರ್ಕಿಸವಂತೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande