ಒಂದು ಕಾಲದ ‘ಧೂಳಿನಪುರ’ ಇಂದು ದೇಶದ ಶುದ್ಧಗಾಳಿಯ ನಗರ : ವಿಜಯಪುರ ಪರಿಸರ ಸಂರಕ್ಷಣೆಯಲ್ಲಿ ಹೊಸ ಮೈಲುಗಲ್ಲು
ವಿಜಯಪುರ, 19 ಜೂನ್ (ಹಿ.ಸ.) : ಆಂಕರ್ : ಒಂದು ಕಾಲದಲ್ಲಿ ಧೂಳು ಮತ್ತು ವಾಯುಮಾಲಿನ್ಯದಿಂದಾಗಿ “ಧೂಳಿನಪುರ” ಎಂಬ ಹಣೆಪಟ್ಟಿ ಪಡೆದಿದ್ದ ವಿಜಯಪುರ ಜಿಲ್ಲೆ, ಇಂದು ದೇಶದಲ್ಲೇ ಅತ್ಯಂತ ಕಡಿಮೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳ ಪೈಕಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಎಂ.ಬಿ. ಪಾಟೀಲ
ಹೆಮ್ಮೆ


ವಿಜಯಪುರ, 19 ಜೂನ್ (ಹಿ.ಸ.) :

ಆಂಕರ್ : ಒಂದು ಕಾಲದಲ್ಲಿ ಧೂಳು ಮತ್ತು ವಾಯುಮಾಲಿನ್ಯದಿಂದಾಗಿ “ಧೂಳಿನಪುರ” ಎಂಬ ಹಣೆಪಟ್ಟಿ ಪಡೆದಿದ್ದ ವಿಜಯಪುರ ಜಿಲ್ಲೆ, ಇಂದು ದೇಶದಲ್ಲೇ ಅತ್ಯಂತ ಕಡಿಮೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳ ಪೈಕಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ, ಹಸಿರು ವಿಸ್ತರಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಕೈಗೊಂಡ ನಿರಂತರ ಪ್ರಯತ್ನಗಳ ಫಲವಾಗಿ ವಿಜಯಪುರದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

2016ರಲ್ಲಿ ಆರಂಭಿಸಲಾದ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಹಸಿರು ಯೋಜನೆಗಳು, ಮರ ನೆಡುವ ಕಾರ್ಯಕ್ರಮಗಳು, ಪರಿಸರ ಜಾಗೃತಿ ಅಭಿಯಾನಗಳು ಹಾಗೂ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಗಳಿಂದ ಜಿಲ್ಲೆಯ ಹಸಿರು ಹೊದಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ವಾಯು ಗುಣಮಟ್ಟ ಸುಧಾರಿಸಿ, ವಿಜಯಪುರ ದೇಶದ ಗಮನ ಸೆಳೆಯುವಂತಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿವೃದ್ಧಿಯ ವೇಗವನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಪರಿಸರದ ಸಮತೋಲನ ಕಾಪಾಡುವುದು ಸಾಧ್ಯ ಎಂಬುದಕ್ಕೆ ವಿಜಯಪುರ ಜಿಲ್ಲೆ ಮಾದರಿಯಾಗಿದೆ. ಕೈಗಾರಿಕೆ, ಮೂಲಸೌಕರ್ಯ ಮತ್ತು ಜನಜೀವನದ ಅಭಿವೃದ್ಧಿಯೊಂದಿಗೆ ಶುದ್ಧ ಗಾಳಿ, ಹಸಿರು ಪರಿಸರ ಹಾಗೂ ಆರೋಗ್ಯಕರ ಬದುಕಿಗೂ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಜಿಲ್ಲೆ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

“ಅಭಿವೃದ್ಧಿಯ ಜೊತೆಗೆ ಪರಿಸರವೂ ನಮ್ಮ ಆದ್ಯತೆ” ಎಂಬ ಧ್ಯೇಯವನ್ನು ವಿಜಯಪುರ ಮತ್ತೊಮ್ಮೆ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸಿರು, ಸ್ವಚ್ಛ ಮತ್ತು ಸುಸ್ಥಿರ ವಿಜಯಪುರ ನಿರ್ಮಾಣಕ್ಕೆ ಈ ಸಾಧನೆ ಪ್ರೇರಣೆಯಾಗಲಿ ಎಂದು ಎಂ.ಬಿ. ಪಾಟೀಲ ಆಶಯ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande