
ಕೊಪ್ಪಳ, 19 ಜೂನ್ (ಹಿ.ಸ.) :
ಆ್ಯಂಕರ್ : ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಮತ್ತು ಸಹಾಯಕ ಕೃಷಿ ನಿರ್ದೇಶಕರು ಕೊಪ್ಪಳ ಇವರ ಸಹಯೋಗದಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಲ್ಲಿ ಸುರಕ್ಷಿತ ಕೀಟನಾಶಕ ಬಳಕೆ ಹಾಗೂ ಸಮತೋಲಿತರಸಗೊಬ್ಬರ ಬಳಕೆ ಕುರಿತು ಅಳವಂಡಿ ಹೋಬಳಿಯ ಬಿಕನಹಳ್ಳಿ ಗ್ರಾಮದಲ್ಲಿ ಹೊರಾವರಣ ತರಬೇತಿ ಏರ್ಪಡಿಸಲಾಗಿತ್ತು.
ಅಧಿಕ ಸಾಂದ್ರತೆ ಹತ್ತಿ ಬೇಸಾಯ ಹಾಗೂ ತೊಗರಿ ಬೆಳೆಯ ನಿರ್ವಹಣೆ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಬದರಿ ಪ್ರಸಾದ್ ಪಿ.ಆರ್. ಅವರು ಸಮಗ್ರ ಮಾಹಿತಿ ನೀಡಿದರು. ಅಲ್ಲದೇ ಬರ ಭೂಮಿ ಬೆಳೆಯಾದ ಗೋಡಂಬಿಯ ಕುರಿತು ಮಾಹಿತಿ ನೀಡಿದರು.
ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರಾದ ಜೀವಂತ ಸಾಬ್ ಅವರು, ರೈತರಿಗೆ ಬೀಜೋಪಚಾರ ಮಹತ್ವ ಪರ್ಯಾಯ ರಸಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ತೋಟಗಾರಿಕಾ ಅಧಿಕಾರಿರಾದ ಆರಿಫ್ ಅವರು, ಕೃಷಿ ಮತ್ತು ತೋಟಗಾರಿಕಾ ಪದ್ಧತಿಯ ಬಗ್ಗೆ ಮಾಹಿತಿ ಕೊಟ್ಟರು.
ಕೋರಮಂಡಲ ಇಂಟನ್ರ್ಯಾಷನಲ್ ಅಧಿಕಾರಿ ಅವಿನಾಶ್ ಅವರು, ನ್ಯಾನೋ ರಸಗೊಬ್ಬರಗಳ ಹಾಗೂ ಡ್ರೋನ್ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಪ್ರತಾಪಗೌಡ, ಮಾರುತಿ, ತಾಂತ್ರಿಕ ವ್ಯವಸ್ಥಾಪಕೆಯವರಾದ ತಾರಾ ಹಾಗೂ ನೂರಾರು ರೈತರು ಭಾಗವಹಿಸಿದ್ದರು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದಪಿ.ಆರ್., ವಿಸ್ತರಣಾ ಮುಂದಾಳು ಮೊ. ನಂ: 9900145705) ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್