
ಸಿರುಗುಪ್ಪ, 18 ಜೂನ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ಜೆಸ್ಕಾಂ ವತಿಯಿಂದ ಹೊಸ 110 ಕೆವಿ ಡಬಲ್ ಸಕ್ರ್ಯೂಟ್ ಲೈನ್ನ ಕಂಡಕ್ಟರ್ ಅಳವಡಿಕೆ (ಸ್ಟ್ರಿಂಗಿಂಗ್) ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.20 ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಸಿರುಗುಪ್ಪ ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಿಸಲಾಗುತ್ತಿರುವ 110 ಕೆವಿ ಎಂ.ಯು.ಎಸ್.ಎಸ್ ಶ್ರೀಧರಗಡ್ಡೆ ವಿದ್ಯುತ್ ಲೈನ್ಗಾಗಿ ಹೊಸ ಡಿಸಿ ಟವರ್ಗಳ ಲೋಕೇಶನ್ ಸಂಖ್ಯೆ 08 ರಿಂದ 13 ರವರೆಗಿನ 1.716 ಕಿ.ಮೀ ದೂರದ ವ್ಯಾಪ್ತಿಯಲ್ಲಿ ಕಂಡಕ್ಟರ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹೊಸ ಲೈನ್ ಹಾಲಿ ಇರುವ 33 ಕೆವಿ ಸಿರುಗುಪ್ಪ-ಹಚ್ಚೊಳ್ಳಿ ಲೈನ್ ಅನ್ನು ಕ್ರಾಸ್ ಮಾಡುವುದರಿಂದ ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ನಿಲುಗಡೆ ಅನಿವಾರ್ಯವಾಗಿದೆ.
33 ಕೆವಿ ಎಂ.ಯು.ಎಸ್.ಎಸ್ ಹಚ್ಚೊಳ್ಳಿ ವ್ಯಾಪ್ತಿಯ ಹಚ್ಚೊಳ್ಳಿ, ಹೊನ್ನಾರಹಳ್ಳಿ, ಶ್ರೀಧರಗಡ್ಡೆ, ಚಿಕ್ಕಬಳ್ಳಾರಿ, ಕುಡುದರಹಾಳ್, ಮಾಟೂರು, ಬೀರಳ್ಳಿ, ಬಸರಹಳ್ಳಿ, ಎ.ಕೆ.ಹಾಳ್, ಕೆ.ಕೆ.ಹಾಳ್, ಕೊತ್ತಲಚಿಂತೆ, ಗುಬ್ಬಿಹಾಳ್ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಹಾಗಾಗಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು. ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್