ವಿಜಯಪುರದಲ್ಲಿ ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶ
ಕೊಪ್ಪಳ, 18 ಜೂನ್ (ಹಿ.ಸ.) : ಆ್ಯಂಕರ್ : ಜೂನ್ 22 ರಂದು ವಿಜಯಪುರದಲ್ಲಿ ನಡೆಯಲಿರುವ ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶದಲ್ಲಿ ಭಾಗವಹಿಸಲಿಚ್ಛೀಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್
ವಿಜಯಪುರದಲ್ಲಿ ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶ


ಕೊಪ್ಪಳ, 18 ಜೂನ್ (ಹಿ.ಸ.) :

ಆ್ಯಂಕರ್ : ಜೂನ್ 22 ರಂದು ವಿಜಯಪುರದಲ್ಲಿ ನಡೆಯಲಿರುವ ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶದಲ್ಲಿ ಭಾಗವಹಿಸಲಿಚ್ಛೀಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಜೂನ್ 22 ರಂದು ಬೆಳಗ್ಗೆ 9 ಘಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ವಿಜಯಪುರ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶವನ್ನು ಹಮ್ಮಿಕೊಂಡಿರುತ್ತಾರೆ. ಈ ವಿವಾಹ ಅನ್ವೇಷಣೆಯಲ್ಲಿರುವ ಹೆಚ್.ಐ.ವಿ. ಸೋಂಕಿತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.

ಸಮಾವೇಷದಲ್ಲಿ ಭಾಗವಹಿಸುವವರಿಗೆ ಶುಲ್ಕ ಇರುವುದಿಲ್ಲ. ಪಾಸ್ಫೋರ್ಟ ಸೈಜಿನ 2 ಭಾವಚಿತ್ರ, ಹೆಚ್.ಐ.ವಿ. ಪರೀಕ್ಷಾ ಮತ್ತು ಎಆರ್ಟಿ ನೊಂದಣಿ ಪುಸ್ತಕ, ಇತ್ತೀಚಿನ 4 ಸಿಡಿ ಮತ್ತು ಕಳೆದ 6 ತಿಂಗಳಿನಲ್ಲಿ ಮಾಡಿಸಿರುವ ವೈರಲ್ ಲೋಡ್ ವರದಿಯೊಂದಿಗೆ ಜೂನ್ 20 ರೊಳಗೆ ನೊಂದಣಿ ಮಾಡಿಕೊಳ್ಳಬೇಕು.

ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶದಲ್ಲಿ ಭಾಗವಹಿಸುವವರಿಗೆ ಅಂದು ಬೆಳಗಿನ ಉಪಹಾರ ಮತ್ತು ಊಟ ನೀಡಲಾಗುವುದು. ಯಾವುದೇ ಪ್ರಯಾಣ ವೆಚ್ಚ ಮತ್ತು ಸಾರಿಗೆ ಭತ್ಯೆ ನೀಡಲಾಗುವುದಿಲ್ಲ. ಎಲ್ಲಾ ಹೆಚ್.ಐ.ವಿ. ಸೋಂಕಿತರು ಪಿ.ಎಲ್.ಹೆಚ್.ಐ.ವಿ. ವಧು-ವರರ ಸಮಾವೇಶದಲ್ಲಿ ಭಾಗವಹಿಸಬಹುದು. ಹೆಸರು ನೋಂದಾಯಿಸಲು ಬಾಬುರಾವ ತಳವಾರ ಮೊ.ಸಂ: 9845465618 ಹಾಗೂ ಮಹಾದೇವಿ ಜಳಕೋಟಿ ಮೊ.ಸಂ: 8310231655 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande