ಜೂ. 21 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್
ಕೊಪ್ಪಳ, 18 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಜಿಲ್ಲಾ ಚೆಸ್ ಅಮೆಚೂರ್ ಅಸೋಸಿಯೇಷನ್ ಹಾಗೂ ಗದಗ ಚೆಸ್ ಅಕಾಡೆಮಿ(ರಿ) ಸಂಯುಕ್ತಾಶ್ರಯದಲ್ಲಿ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಜೂನ್ 21 ರಂದು ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗ
Open Rapid Chess Tournament at District Stadium


ಕೊಪ್ಪಳ, 18 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಜಿಲ್ಲಾ ಚೆಸ್ ಅಮೆಚೂರ್ ಅಸೋಸಿಯೇಷನ್ ಹಾಗೂ ಗದಗ ಚೆಸ್ ಅಕಾಡೆಮಿ(ರಿ) ಸಂಯುಕ್ತಾಶ್ರಯದಲ್ಲಿ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಜೂನ್ 21 ರಂದು ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.

ಈ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಎಲ್ಲಾ ವಯೋಮಿತಿಯವರಿಗೆ ರಾಜ್ಯ ಮಟ್ಟದ ಮುಕ್ತ ಪಂದ್ಯಾವಳಿಯಾಗಿದ್ದು, ಪ್ರಥಮ ಬಹುಮಾನ 2,500 ರೂ., ದ್ವಿತೀಯ 2,000 ರೂ., ತೃತೀಯ 1,500 ರೂ., ನಾಲ್ಕನೇ ಬಹುಮಾನ 1,000 ರೂ. ಹಾಗೂ 5 ರಿಂದ 10ರ ವರೆಗಿನ ಬಹುಮಾನ 600 ರೂ.ಗಳ ಬಹುಮಾನವಿರುತ್ತದೆ. ಕೊಪ್ಪಳ ಜಿಲ್ಲೆಯ ಉತ್ತಮ ಪ್ರದರ್ಶನ ತೋರಿದ 3 ಜನ ಚೆಸ್ ಕ್ರೀಡಾಪಟುಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. 9 ವರ್ಷ ವಯೋಮಿತಿಯೊಳಗಿನ, 11 ವರ್ಷ ವಯೋಮಿತಿಯೊಳಗಿನ, 13 ವರ್ಷ ವಯೋಮಿತಿಯೊಳಗಿನ, 15 ವರ್ಷ ವಯೋಮಿತಿಯೊಳಗಿನ ವಿಜೇತ ಬಾಲಕ ಬಾಲಕೀಯರಿಗೆ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದವರಿಗೆ ಆಕರ್ಷಕ ಟ್ರೋಫಿ ಹಾಗೂ 3 ರಿಂದ 5 ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಆಕರ್ಷಕ ಮೆಡಲ್ ನೀಡಲಾಗುವುದು.

ಈ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ಗೆ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಫೋನ್ ಪೇ ಸ್ಕ್ಯಾನರ್ ಮೂಲಕ ನೊಂದಣಿ ಶುಲ್ಕ 500 ರೂ.ಗಳನ್ನು ಭರಿಸಿ ನೋಂದಣಿ ಮಾಡಿಕೊಳ್ಳಬೇಕು. ನೊಂದಣಿಯಾದ ಕ್ರೀಡಾಪಟುಗಳು ಟೂರ್ನಮೆಂಟ್ ದಿನದಂದು ಕಡ್ಡಾಯವಾಗಿ ಬೆಳಿಗ್ಗೆ 9 ಗಂಟೆಯೊಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಮಧ್ಯಾಹ್ನ ಲಘು ಉಪಹಾರವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9535027184, 7019506442 ಗೆ ಸಂಪರ್ಕಿಸಬಹುದಾಗಿರುತ್ತದೆ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande