ತೋಟಗಾರಿಕೆ ಇಲಾಖೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ, 18 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲೆಯ ತೋಟಗಾರಿಕೆ ಬೆಳೆ ಬೆಳೆಯುವ ರೈತ ಬಾಂಧವರಿಗೆ ತೋಟಗಾರಿಕೆ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಇಲಾಖಾ ಯೋಜನೆಗಳಡಿ ಸಹಾಯಧನ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗ
ತೋಟಗಾರಿಕೆ ಇಲಾಖೆ ಸಹಾಯಧನಕ್ಕೆ ಅರ್ಜಿ ಆಹ್ವಾನ


ಬಳ್ಳಾರಿ, 18 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ತೋಟಗಾರಿಕೆ ಬೆಳೆ ಬೆಳೆಯುವ ರೈತ ಬಾಂಧವರಿಗೆ ತೋಟಗಾರಿಕೆ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಇಲಾಖಾ ಯೋಜನೆಗಳಡಿ ಸಹಾಯಧನ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ ಕೋಟಿಮನಿ ಅವರು ತಿಳಿಸಿದ್ದಾರೆ.

ಹೊಸ ಪ್ರದೇಶ ವಿಸ್ತರಣೆ ಯೋಜನೆ:

ಅಂಜೂರ, ದಾಳಿಂಬೆ, ಸೀಬೆ, ಡ್ರಾಗನ್ ಫ್ರೂಟ್, ನುಗ್ಗೆ, ಸೀತಾಫಲ, ಹಲಸು, ನೇರಳೆ, ತೆಂಗು, ಕರಿಬೇವು ಸೇರಿದಂತೆ ಸೂಚಿತ ಇತರೆ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್:

*ಪ್ರದೇಶ ವಿಸ್ತರಣೆ ಮತ್ತು ಸಂರಕ್ಷಿತ ಬೇಸಾಯ:* ವೀಡ್ ಮ್ಯಾಟ್, ಪ್ಲಾಸ್ಟಿಕ್ ಮಲ್ಚಿಂಗ್ ಹಾಗೂ ಪಕ್ಷಿ ನಿರೋಧಕ ಬಲೆ ಅಳವಡಿಕೆ.

*ಮಣ್ಣು ಮತ್ತು ನೀರು ಸಂರಕ್ಷಣೆ:* ವೈಯಕ್ತಿಕ ಕೃಷಿ ಹೊಂಡಗಳ ನಿರ್ಮಾಣ.

*ಕೋಯ್ಲೋತ್ತರ ನಿರ್ವಹಣೆ:* ಈರುಳ್ಳಿ ಶೇಖರಣೆ ಘಟಕ ಹಾಗೂ ತೋಟಗಾರಿಕೆ ಟ್ರಾಕ್ಟರ್ ಚಾಲಿತ ಯಂತ್ರೋಪಕರಣಗಳಿಗೆ ಅನುದಾನದ ಲಭ್ಯತೆ ಆಧರಿಸಿ ಶೇಕಡವಾರು ಸಹಾಯಧನ ನೀಡಲಾಗುವುದು.

*ಪ್ರಧಾನ ಮಂತ್ರಿ ಕೃಷಿ ವಿಕಾಸ ಯೋಜನೆ:*

‘ಪ್ರತಿ ಹನಿಗೆ ಅಧಿಕ ಬೆಳೆ' ಕಾರ್ಯಕ್ರಮದಡಿ ಹೊಸದಾಗಿ ಹನಿ ನೀರಾವರಿ ಘಟಕವನ್ನು ಅಳವಡಿಸಿಕೊಳ್ಳುವ ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ವಿತರಿಸಲಾಗುವುದು.

*ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ - ತಾಳೆ ಬೆಳೆ ಯೋಜನೆ:*

ತಾಳೆ ಬೆಳೆ ಬೆಳೆಯಲು ಆಸಕ್ತಿ ಇರುವ ರೈತರಿಗೆ ವಿವಿಧ ಹಂತಗಳಲ್ಲಿ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಹೊಸ ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್ಗೆ ರೂ. 20 ಸಾವಿರ. 1 ರಿಂದ 4 ವರ್ಷಗಳ ಬೇಸಾಯ ನಿರ್ವಹಣೆಗೆ ಪ್ರತಿ ವರ್ಷ ಹೆಕ್ಟೇರ್ಗೆ ರೂ. 5,250 ಹಾಗೂ ಅಂತರ ಬೆಳೆಗೆ ರೂ. 5,250. ಎತ್ತರವಾದ ಮರಗಳಿಂದ ಹಣ್ಣು ಕಟಾವು ಮಾಡಲು ಪ್ರತಿ ಟನ್ಗೆ ರೂ. 1,000 (ಗರಿಷ್ಠ 60 ಟನ್). ಡೀಸೆಲ್ ಪಂಪ್ ಸೆಟ್ಗೆ ರೂ. 8 ಸಾವಿರ, ಕೊಳವೆ ಬಾವಿಗೆ ರೂ. 50 ಸಾವಿರ. ತಾಳೆ ಹಣ್ಣು ಕಟಾವು ಉಪಕರಣ/ಮೊಟೊರೈಸ್ಡ್ ಚಿಸೆಲ್ ಒದಗಿಸಲು ರೂ. 15 ಸಾವಿರ, ಏಣಿಗೆ ರೂ. 5 ಸಾವಿರ, ಚಾಫ್ ಕಟ್ಟರ್ಗೆ ರೂ. 50 ಸಾವಿರ ಹಾಗೂ ಟ್ರಾಕ್ಟರ್ ಟ್ರೋಲಿ ಖರೀದಿಗೆ ರೂ. 1,60,000 ವರೆಗೆ ಸಹಾಯಧನ ಲಭ್ಯವಿದೆ.

*ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ:*

ಕ್ಷೇತ್ರ ಮಟ್ಟದಲ್ಲಿ ತರಕಾರಿ/ಹಣ್ಣುಗಳ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ, ಈರುಳ್ಳಿ ಶೇಖರಣೆ ಘಟಕ, ಪ್ಲಾಸ್ಟಿಕ್ ಕ್ರೇಟ್ಸ್/ಪುನೆಟ್ ಬಾಕ್ಸ್, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕಗಳಿಗೆ ಧನಸಹಾಯ ನೀಡಲಾಗುವುದು. ಜೊತೆಗೆ ಗುಣಮಟ್ಟದ ಉತ್ಪಾದನೆಗಾಗಿ ಲಘುಪೆÇೀಷಕಾಂಶಗಳ ಮಿಶ್ರಣ, ಸೋಲಾರ್ ಪಂಪ್ ಸೆಟ್ ಮತ್ತು ಸ್ವಯಂ ಚಾಲಿತ ಹವಮಾನ ಆಧಾರಿತ ಘಟಕಗಳಿಗೂ ಪೆÇ್ರೀತ್ಸಾಹಧನವಿದೆ.

*ಇತರೆ ಪ್ರಮುಖ ಯೋಜನೆಗಳು:*

ಮಧುವನ ಮತ್ತು ಜೇನು ಸಾಕಾಣಿಕೆ ಯೋಜನೆಯಡಿ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ಗಳಿಗೆ ಸಹಾಯಧನ. ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣದಡಿ ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗೆ ಸೌಲಭ್ಯ. ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ತೋಟಗಾರಿಕೆಯಲ್ಲಿ ಬಳಸುವ ಆಧುನಿಕ ಯಾಂತ್ರೀಕರಣ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

*ವಿಶೇಷ ಮೀಸಲಾತಿ ಮತ್ತು ಆದ್ಯತೆ:*

ಅನುಷ್ಠಾನಗೊಳ್ಳುವ ಎಲ್ಲಾ ಯೋಜನೆಗಳಡಿ ನಿಯಮಾನುಸಾರ ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಹಾಗೂ ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ.

ಈ ಎಲ್ಲಾ ಸೌಲಭ್ಯಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಗುರಿಗಳಿಗೆ ಅನುಗುಣವಾಗಿ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಮೇರೆಗೆ ವಿತರಿಸಲಾಗುವುದು. ಆಸಕ್ತ ರೈತರು ತಕ್ಷಣವೇ ತಮ್ಮ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು, ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande