ಚೋರನೂರು : ಮಸ್ಜಿದ್ ಎ ನೂರ್ ವಖ್ಫ್ ಸಂಸ್ಥೆಗಳ ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ
ಬಳ್ಳಾರಿ, 18 ಜೂನ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದ ಮಸ್ಜಿದ್ ಎ ನೂರ್, ಈದ್ಗಾ ಮತ್ತು ಖಬರಸ್ತಾನ್ ವಖ್ಫ್ ಸಂಸ್ಥೆಗಳಿಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಅರ್ಜಿ ವಿತರಣೆ ಮತ್ತು ಸಲ್ಲಿಕೆ:
ಚೋರನೂರು : ಮಸ್ಜಿದ್ ಎ ನೂರ್ ವಖ್ಫ್ ಸಂಸ್ಥೆಗಳ ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ


ಬಳ್ಳಾರಿ, 18 ಜೂನ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದ ಮಸ್ಜಿದ್ ಎ ನೂರ್, ಈದ್ಗಾ ಮತ್ತು ಖಬರಸ್ತಾನ್ ವಖ್ಫ್ ಸಂಸ್ಥೆಗಳಿಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ವಿತರಣೆ ಮತ್ತು ಸಲ್ಲಿಕೆ:

ಜುಲೈ 03 ರವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 05.30 ಗಂಟೆಯ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 3 ಇತ್ತೀಚಿನ ಭಾವಚಿತ್ರಗಳು, 100 ರೂ. ಶುಲ್ಕ ಹಾಗೂ ಅಧಿಕೃತ ವಿಳಾಸದ 2 ಗುರುತಿನ ಚೀಟಿಗಳೊಂದಿಗೆ ಜುಲೈ 03 ರ ಮಧ್ಯಾಹ್ನ 03.30 ಗಂಟೆಯೊಳಗೆ ಚೋರನೂರು ಗ್ರಾಮದ ಮಸ್ಜಿದ್ ಎ ನೂರ್ ನಲ್ಲಿ ಸ್ಥಾಪಿಸಲಾಗಿರುವ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು.

ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಜುಲೈ 07 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಜುಲೈ 08 ರಿಂದ ಜುಲೈ 14 ರವರೆಗೆ (ಬೆಳಿಗ್ಗೆ 11 ರಿಂದ ಸಂಜೆ 5.30 ಗಂಟೆಯೊಳಗೆ) ಸಲ್ಲಿಸಬಹುದಾಗಿದೆ. ಸಲ್ಲಿಕೆಯಾದ ಆಕ್ಷೇಪಣೆಗಳ ವಿಚಾರಣೆಯನ್ನು ಜುಲೈ 15 ರಂದು ಬೆಳಿಗ್ಗೆ 11 ಗಂಟೆಯಿಂದ ನಡೆಸಲಾಗುತ್ತದೆ.

ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಜುಲೈ 18 ರಂದು ಚೋರನೂರಿನ ಮಸ್ಜಿದ್ ಎ ನೂರ್ ಮತ್ತು ಬಳ್ಳಾರಿಯ ಜಿಲ್ಲಾ ವಖ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande