
ಬಳ್ಳಾರಿ, 18 ಜೂನ್ (ಹಿ.ಸ.) :
ಆ್ಯಂಕರ್ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ವತಿಯಿಂದ ವಿಸ್ತøತ ಮತ್ತು ಬಲಪಡಿಸಿದ ‘ನಿಧಿ ಆಪ್ಕೆ ನಿಕಟ್ : ಭವಿಷ್ಯ ನಿಧಿ ನಿಮ್ಮ ಹತ್ತಿರ’ ಜನಸಂಪರ್ಕ ಕಾರ್ಯಕ್ರಮವನ್ನು ಜೂ.29 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ನಿಗದಿಪಡಿಸಿದ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳಗಳ ವಿವರ:
ಬಳ್ಳಾರಿ ಜಿಲ್ಲೆ- ಜೈ ರಾಜ್ ಇಸ್ಪಾತ್ ಲಿಮಿಟೆಡ್, ಬಳ್ಳಾರಿ.
ಕೊಪ್ಪಳ ಜಿಲ್ಲೆ- ಕೊಪ್ಪಳ ಜಿಲ್ಲಾ ಪಿ ಆರ್ ಹೆಚ್ ಡಬ್ಲ್ಯೂ ಕೋ-ಆಪರೇಟಿವ್ ಸೊಸೈಟಿ, ಕೊಪ್ಪಳ.
ವಿಜಯನಗರ ಜಿಲ್ಲೆ- ರೈ ಬಹದ್ದೂರ್ ಸೇಠ್ ಶ್ರೀರಾಮ್ ನರಸಿಂಗದಾಸ್ ಪ್ರೈವೇಟ್ ಲಿಮಿಟೆಡ್, ಹೊಸಪೇಟೆ, ವಿಜಯನಗರ ಜಿಲ್ಲೆ.
ಚಿತ್ರದುರ್ಗ ಜಿಲ್ಲೆ- ಚಿತ್ರದುರ್ಗ ಡಾನ್ ಬಾಸ್ಕೋ ಸೊಸೈಟಿ, ಚಿತ್ರದುರ್ಗ.
ಈ ಕಾರ್ಯಕ್ರಮವು ಪ್ರಮುಖವಾಗಿ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರ ಕುಂದುಕೊರತೆಗಳ ನಿವಾರಣೆಗೆ ಹಾಗೂ ಮಾಹಿತಿ ವಿನಿಮಯಕ್ಕೆ ಒಂದು ವಿಶಾಲ ವೇದಿಕೆಯಾಗಿದೆ. ಉದ್ಯೋಗದಾತರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕಾರ್ಮಿಕರಿಗೆ, ಉದ್ಯೋಗದಾತರಿಗೆ, ಪ್ರಧಾನ ಉದ್ಯೋಗದಾತರಿಗೆ ಮತ್ತು ಗುತ್ತಿಗೆದಾರರಿಗೆ ಲಭ್ಯವಿರುವ ವಿವಿಧ ಆನ್ಲೈನ್ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇಪಿಎಫ್ಒ ಸಂಸ್ಥೆಯ ಹೊಸ ಉಪಕ್ರಮಗಳು ಹಾಗೂ ಸುಧಾರಣೆಗಳ ಕುರಿತು ಸಾರ್ವಜನಿಕರಿಗೆ ವಿವರ ಒದಗಿಸಲಾಗುತ್ತದೆ.
ಸಂಬಂಧಪಟ್ಟ ಎಲ್ಲಾ ಕಾರ್ಮಿಕರು, ಪಿಂಚಣಿದಾರರು ಹಾಗೂ ಉದ್ಯೋಗದಾತರು ಜೂನ್ 29 ರಂದು ತಮ್ಮ ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್