ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು : ಬಿ. ನಾಗರಾಜ
ಸಾಂಸ್ಕೃತಿಕೋತ್ಸವ
ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು : ಬಿ. ನಾಗರಾಜ


ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು : ಬಿ. ನಾಗರಾಜ


ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು : ಬಿ. ನಾಗರಾಜ


ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು : ಬಿ. ನಾಗರಾಜ


ಬಳ್ಳಾರಿ, 18 ಜೂನ್ (ಹಿ.ಸ.) :

ಆ್ಯಂಕರ್ : ಕಲೆ, ನಾಟಕ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರು - ಕಲಾಪೋಷಕರು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ ಅವರು ತಿಳಿಸಿದ್ದಾರೆ.

ಡಿ. ಕಗ್ಗಲ್ನ ರಂಗ ಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ

ಸಹಯೋಗದಲ್ಲಿ ಡಿ. ಕಗ್ಗಲ್ಲು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಬಯಲು ವೇದಿಕೆಯಲ್ಲಿ ನಡೆದ `ಸಾಂಸ್ಕೃತಿಕತ್ಸವ - 2026'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಲ್ಲು ನಿರಂತರ ನಡೆಯಬೇಕು. ಈ ನಿಟ್ಟಿನಲ್ಲಿ `ಸಾಂಸ್ಕೃತಿಕೋತ್ಸವ - 2026'ವನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಾವಿದರೂ ಮತ್ತು ಕಲಾಪೋಷಕರು ಈ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಶ್ರೀಧರಗಡ್ಡೆಯ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯಗುರು ಎ. ಮಲ್ಲಪ್ಪ ಅವರು, ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವ ದಿನಗಳಲ್ಲಿ ಗ್ರಾಮೀಣರು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಆಲಂಬಾಷ, ಶಿಕ್ಷಕರಾದ ಗಾದಿಲಿಂಗಪ್ಪ ಹಾಗೂ ನೃತ್ಯಗುರು ಅಭಿಷೇಕ್ ಅವರು ವೇದಿಕೆಯಲ್ಲಿದ್ದರು.

ಕೆ.ಸಿ. ಸುಂಕಣ್ಣ ಮತ್ತು ತಂಡ (ಬಳ್ಳಾರಿ) ಅವರಿಂದ ಸಮೂಹ ನೃತ್ಯ, ವಿನಯ್ ಮತ್ತು ತಂಡ (ಸಿಂದಿಗೆರೆ) ಅವರಿಂದ ಸುಗಮ ಸಂಗೀತ, ವಿಜಯಕುಮಾರ್ ಮತ್ತು ತಂಡ (ಕುರುಗೋಡು) ಅವರಿಂದ ಜಾನಪದ ಡೊಳ್ಳು ಕುಣಿತ, ಪ್ರಕಾಶ್ ಎಂ. ಮತ್ತು ತಂಡ (ಹೂವಿನಹಡಗಲಿ) ಅವರಿಂದ ರಂಗಗೀತೆಗಳು, ಎಸ್.ಎಂ. ಹುಲುಗಪ್ಪ ಮತ್ತು ತಂಡ (ಬಳ್ಳಾರಿ) ಅವರಿಂದ ಜಾಗೃತಿ ಗೀತೆಗಳು, ಕೆ.ಎಂ. ಸದಾನಂದ ಸ್ವಾಮಿ ಮತ್ತು ತಂಡ (ಡಿ. ಕಗ್ಗಲ್) ಅವರಿಂದ ತತ್ವಪದಗಳ ಗಾಯನ, ಎನ್. ಸುಮಂಗಲ ಮತ್ತು ತಂಡ (ಸಿರಿಗೇರಿ) ಅವರಿಂದ ಪೌರಾಣಿಕ ಹಾಸ್ಯ ನಾಟಕ `ಶ್ರೀಕೃಷ್ಣ ಸಂಧಾನ' ಹಾಗೂ ಶ್ರೀಮತಿ ಹುಲಿಗೆಮ್ಮ ಮತ್ತು ತಂಡ (ಬಳ್ಳಾರಿ) ಅವರಿಂದ ತೋಗಲು ಗೊಂಬೆ ಆಟ ಪ್ರದರ್ಶನಗೊಂಡವು.

ವೀರೇಶ್ ಮತ್ತು ತಂಡ ಪ್ರಾರ್ಥನೆ ಮಾಡಿತು. ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ವಿಷ್ಣು ಹಡಪದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande