ಸಂಡೂರು ಯುವಕ ಕಾಣೆ
ಸಂಡೂರು, 17 ಜೂನ್ (ಹಿ.ಸ.) : ಆ್ಯಂಕರ್ : ಸಂಡೂರು ತಾಲ್ಲೂಕಿನ ಹೊಸ ಮಾದಾಪುರ ಗ್ರಾಮದಲ್ಲಿ ನೆಲೆಸಿದ್ದ ತಮಿಳುನಾಡು ರಾಜ್ಯದ ಮಧುರೈ ಜಿಲ್ಲೆಯ ತಿರುಮಂಗಲತಾ, ಮೆಟ್ಟುಪಟ್ಟಿ ಗ್ರಾಮದ ರಾಜು ದೊರೆ ಪಾಂಡಿಯನ್(20) ಕಾಣೆಯಾಗಿರುವ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ
ಯುವಕ ಕಾಣೆ


ಸಂಡೂರು, 17 ಜೂನ್ (ಹಿ.ಸ.) :

ಆ್ಯಂಕರ್ : ಸಂಡೂರು ತಾಲ್ಲೂಕಿನ ಹೊಸ ಮಾದಾಪುರ ಗ್ರಾಮದಲ್ಲಿ ನೆಲೆಸಿದ್ದ ತಮಿಳುನಾಡು ರಾಜ್ಯದ ಮಧುರೈ ಜಿಲ್ಲೆಯ ತಿರುಮಂಗಲತಾ, ಮೆಟ್ಟುಪಟ್ಟಿ ಗ್ರಾಮದ ರಾಜು ದೊರೆ ಪಾಂಡಿಯನ್(20) ಕಾಣೆಯಾಗಿರುವ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಉಪ ನಿರೀಕ್ಷಕರು ತಿಳಿಸಿದ್ದಾರೆ.

ಯುವಕನ ಚಹರೆ:

ತೆಳ್ಳಗಿನ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಎಡಗೈಯಲ್ಲಿ ಹಾಗೂ ಕತ್ತಿನ ಮೇಲೆ ಹಚ್ಚೆ ಹಾಕಿಸಿರುತ್ತಾನೆ. ಮನೆಯಿಂದ ಹೊರಡುವ ಸಮಯದಲ್ಲಿ ಹಸಿರು ಹಾಗೂ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ಹಿಂದಿ, ತಮಿಳು ಭಾಷೆ ಮಾತನಾಡುತ್ತಾನೆ.

ಕಾಣೆಯಾದ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕುರುಗೋಡು ಸಿ.ಪಿ.ಐ. ಮೊ.9480803039, ತೋರಣಗಲ್ಲು ಪೊಲೀಸ್ ಠಾಣೆಯ ಡಿ.ಎಸ್.ಪಿ. ಮೊ.9480803010, ಬಳ್ಳಾರಿ ಎಸ್.ಪಿ ಕಚೇರಿ ದೂ.08392-258400 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande